Category Archives: Bidar News

ಗ್ರೀಟಿಂಗ್ ಕಾರ್ಡ್ ತಯಾರಿಸುವ ಸ್ಪರ್ಧೆ

ಬೀದರ್: ರೋಟರಿ ಕ್ಲಬ್ ವತಿಯಿಂದ ಶನಿವಾರ ನಗರದ ಜ್ಞಾನಸುಧಾ ಶಾಲೆಯಲ್ಲಿ ಗ್ರೀಟಿಂಗ್ ಕಾರ್ಡ್ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.ಪ್ರಾಥಮಿಕ ತರಗತಿಯ ಸುಮಾರು 200 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ವರುಣ, ಕೃಷ್ಣಾ, ರಿತೇಶ, ಗಣೇಶ ಹಾಗೂ ಅಶೋಕ್ ಅವರಿಗೆ ಬಹುಮಾನಗಳನ್ನು ನೀಡಲಾಯಿತು.ಪ್ರಶಸ್ತಿ ವಿಜೇತರಿಗೆ ಬಾಲ ಕಲಾವಿದೆ ಮೇಘಾ ಅರವಿಂದ ಹಳ್ಳಿಖೇಡೆ ಅವರಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ವೀರಪ್ಪ ಕಾಲೇಜುವಿದ್ಯಾರ್ಥಿನಿಯರಿಗೆ ಸನ್ಮಾನ

ಹುಮನಾಬಾದ್: ಪಟ್ಟಣದ ರಾಮಚಂದ್ರ ವೀರಪ್ಪಾ ಮಹಿಳಾ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ ಶೇ.100ರಷ್ಟು ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿನಿಯರು ಉತ್ತಮ ಸಾಧನೆ ಗೈದಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ ನಡೆಸಿರುವ  ಪರೀಕ್ಷೆಯಲ್ಲಿ ಒಟ್ಟು 61 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 51 ಅಗ್ರ ಶ್ರೇಣಿ, 4 ಪ್ರಥಮ ದರ್ಜೆ ಸೇರಿದಂತೆ ಎಲ್ಲಾ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಬಸವೇಶ್ವರ ಶಾಲೆಯಲ್ಲಿ ಅಕ್ಷರ ಜ್ಯೋತಿಯಾತ್ರೆ

ಬಸವಕಲ್ಯಾಣ: ಮಕ್ಕಳಿಗೆ ನೀಡುವ ಊಟ ಅದು ದೇವರಿಗೆ ನೀಡುವ ನೈವಿದ್ಯಕ್ಕಿಂತ ಶ್ರೇಷ್ಠ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ನುಡಿದರು. ಇಲ್ಲಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡ ಅಕ್ಷರ ಜ್ಯೋತಿಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರಬೇಕಾದ ಗುಣಗಳೇನು ಎಂಬ ಪ್ರಶ್ನೆಯ ಮೂಲಕ ಮಕ್ಕಳನ್ನು ಸಂವಾದದಲ್ಲಿ ತೊಡಗಿಸಿಕೊಂಡರು.

ಒಬ್ಬರು ಕನಿಷ್ಠ 5 ಸಸಿ ಬೆಳೆಸಿ: ಸಾಮವೇಲ್

ಬೀದರ್: ಪರಿಸರ ನೈರ್ಮಲ್ಯ ಸಂರಕ್ಷಿಸಬೇಕಾದರೆ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಕನಿಷ್ಠ ಐದು ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ಸಿಆರ್ಪಿ ಶ್ರೀಮಂತ ಸಾಮವೇಲ್ ಮಕ್ಕಳಿಗೆ ಕರೆ ನೀಡಿದರು.ನಗರದ ಲಾಡಗೇರಿಯ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಗುವಿಗೊಂದು ಮರ, ಶಾಲೆಗೊಂದು ವನ ಕಾರ್ಯಕ್ರಮದಲ್ಲಿ ಸಸಿಗಳಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಜೀವ ಸಂಕುಲ ಏಳಿಗೆಯಾಗಬೇಕಾದರೆ ಪರಿಸರ ಕಾಪಾಡುವುದು ಕರ್ತವ್ಯವಾಗಿದೆ ಎಂದರು.

ವಿಷ ಕೊಡಿ ಇಲ್ಲ ಪರಿಹಾರ ನೀಡಿ

ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೆಳೆ ಹಾನಿಯಾಗಿದ್ದರ ಬಗ್ಗೆ ತಪ್ಪು ವರದಿ ಸಲ್ಲಿಸಿದ್ದಾರೆ. ತಪ್ಪು ವರದಿಯ ಅನ್ವಯ ಬೇರೆಯವರಿಗೆ ಪರಿಹಾರ ನೀಡಲಾಗಿದೆ ಎಂದು ದೂರಿರುವ ರೈತರು, ನಮ್ಮ ಮೇಲೆ ಅನ್ಯಾಯವಾಗಿದೆ.

ಆಲಿಕಲ್ಲು ಮಳೆ ಹಾನಿ; ಪರಿಹಾರಕ್ಕೆ ಧರಣಿ

ಔರಾದ್: ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಕಳೆದುಕೊಂಡ ವಡಗಾಂವ ಹೋಬಳಿ ರೈತರು ಪಟ್ಟಣದ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿದರು.ತಾಲೂಕಿನ ವಡಗಾಂವ ಗ್ರಾಮದ ನೂರಾರು ರೈತರು ಶನಿವಾರ ತಹಸೀಲ ಕಚೇರಿ ಬಳಿ ಕೆಲ ಕಾಲ ಪ್ರತಿಭಟಿಸಿ ಕಳೆದ ವರ್ಷ ಹಿಂಗಾರು ಬೆಳೆ ಅಕಾಲಿಕ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ದರ ಪರಿಷ್ಕರಣೆಗೆ ಆಕ್ಷೇಪ

ಬೀದರ್: ಜಿಲ್ಲೆಯ, ನಿವೇಶನ ಮತ್ತು ಇತರ ಸ್ಥಿರಾಸ್ತಿಗಳ ಮಾರುಕಟ್ಟೆ ದರ ಪರಿಷ್ಕರಣೆಗೆ ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಕ್ಷೇಪಣೆ ಸಲ್ಲಿಸಿದೆ.ಈ ಕುರಿತು ಕಂದಾಯ ಸಚಿವರಿಗೆ ಪತ್ರ ಬರೆದಿರುವ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ ಅವರು ಜುಲೈ  ತಿಂಗಳು ಮುಗಿಯುತ್ತದ್ದರೂ ಬೀದರ್ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಮಳೆಯಾಗದ ಕಾರಣ, ಬಿತ್ತನೆಯಾಗದೆ ಜಿಲ್ಲೆಯ ಜನರು ಬರಗಾಲ ಎದುರಿಸುತ್ತಿದ್ದಾರೆ. ರೈತರು ಭೂಮಿಗೆ ಹಾಕಿದ ಬೀಜ ಮತ್ತು ಗೊಬ್ಬರ ನಷ್ಟವಾಗಿ ಅಪಾರ ಹಾನಿ ಅನುಭವಿಸುತ್ತಿದ್ದಾರೆ.

ಶ್ರಾವಣ ಮಾಸಕ್ಕೆ ಚಾಲನೆ

ಬೀದರ್: ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಪ್ರಸಕ್ತ ಸಾಲಿನ ಶ್ರಾವಣ ಮಾಸದ ನಿಮಿತ್ತ ಷಟಸ್ಥಲ ದರ್ಶನ ಪ್ರವಚನದ ಉದ್ಘಾಟನಾ ಸಮಾರಂಭ ಜು.28ರಂದು ಸಂಜೆ ಹಮ್ಮಿಕೊಳ್ಳಲಾಗಿದೆ. ಸಂಜೆ 6.30ಕ್ಕೆ ಜರುಗಲಿರುವ ಸಮಾರಂಭದ ಸಾನ್ನಿಧ್ಯವನ್ನು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು ವಹಿಸುವರು.

ಮೌಲ್ಯ ಕಾವ್ಯಕ್ಕೆ ಎಲ್ಲ ಕಾಲಕ್ಕೂ ಬೆಲೆ

ಬೀದರ್: ಸಮಾಜದ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಹಾಗೂ ತನ್ನ ಸುತ್ತಲಿನ ಪರಿಸರದ ಮೇಲೂ ಕಣ್ಣಾಡಿಸುವ ಕಾವ್ಯಕ್ಕೆ ಎಲ್ಲಾ ಕಾಲದಲ್ಲಿಯೂ ಬೆಲೆ ಇದೆ ಎಂಬುದನ್ನು ನಾವೆಲ್ಲರು ಅರಿತುಕೊಳ್ಳಬೇಕೆಂದು ಜಾನಪದ ವಿದ್ವಾಂಸ ಡಾ. ಸೋಮನಾಥ ನುಚ್ಚಾ ಅಭಿಪ್ರಾಯ ವ್ಯಕ್ತಪಡಿಸಿದರು.

ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ

ಹುಮನಾಬಾದ್: ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಜರುಗಿದೆ. ಬಂಧಿತರಿಂದ ಒಂದು ಪಟ್ಟಿಗೆ ಸಾರಾಯಿ ಹಾಗೂ 1500 ನಗದು ವಶಪಡಿಸಿಕೊಳ್ಳಲಾಗಿದೆ. ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SEO Powered by Platinum SEO from Techblissonline