bilkoduge samarambha

ಕುದುರೆ ಪರಿವಾರಕ್ಕೆ ಆತ್ಮೀಯ ಬೀಳ್ಕೊಡುಗೆ

bilkoduge samarambha newsಬೀದರ: ನಗರದ ಹನುಮಾನ ನಗರದಲ್ಲಿನ ಆಶ್ವಿನಿ ಕುದುರೆ ಅಡಿಟೋರಿಯಮ್ ಹಾಲ್‍ನಲ್ಲಿ ಸೋಮವಾರ ಕಾರಂಜಾ ಅಧಿಕಾರಿ ಶಂಭುಲಿಂಗ ಕುದುರೆ, ಪತ್ನಿ ಜೈಶ್ರೀ ಕುದುರೆ ಹಾಗೂ ಪುತ್ರಿ ಅಶ್ವಿನಿ ಕುದುರೆ ಅವರು ಬೌದ್ದ ಧರ್ಮ ಅಧ್ಯಯನಕ್ಕಾಗಿ ಶ್ರೀಲಂಕಾಗೆ ತೆರಳುತ್ತಿದ್ದುದರ ಹಿನ್ನಲೆಯಲ್ಲಿ ಕುದುರೆ ಪರಿವಾರ ಹಾಗೂ ಬಂಧು ಮಿತ್ರರಿಂದ ಹೃದಯಸ್ಪರ್ಷಿ ಬೀಳ್ಕೊಡಲಾಯಿತು.
ಈ ಸುಂದರ ಸಮಾರಂಭದ ದಿವ್ಯ ಸಾನಿಧ್ಯವನ್ನು ತಾಲೂಕಿನ ಅಣದೂರಿನ ವೈಶಾಲಿ ನಗರದ ಭಂತೆ ವರಜ್ಯೋತಿ ವಹಿಸಿ ಆಶಿರ್ವದಿಸಿ, ಬೀಳ್ಕೊಡುಗೆ ಅನ್ನುವುದು ಪ್ರೀತಿ, ಸಹಕಾರ ಸಂಕೇತವಾಗಿದ್ದು, ಹರ್ಷಿಸಿ, ಆನಂದದಿಂದ ಬೀಳ್ಕೊಟ್ಟರೆ ಅವರಿಗೆ ಜೀವನದಲ್ಲಿ ಮಂಗಳವಾಗಲಿದೆ ಎಂದರು.
ಅ.26ರಿಂದ ನ.5ರ ವರೆಗೆ ಬೀದರ್ ಜಿಲ್ಲೆಯಿಂದ 16 ಜನ ಸೇರಿ ಒಟ್ಟು ನಮ್ಮ ರಾಜ್ಯದಿಂದ ಸುಮಾರು 47 ಬುದ್ದ ಅನುಯಾಯಿಗಳು ಶ್ರೀಲಂಕಾದಲ್ಲಿ ಯಾತ್ರೆ ನಡೆಸಿ, ತಥಾಗತ ಗೌತಮ ಬುದ್ಧರ ದಂತ ಧಾತು, ಕೇಶ ಧಾತು, ಅನುರಾದ ಪೂರದಲ್ಲಿನ ಸಂಘಮಿತ್ರ ಪವಿತ್ರ ಬೋಧಿವೃಕ್ಷ ದರುಶನಕ್ಕಾಗಿ ಜೊತೆಗೆ ಬೌದ್ದ ಧರ್ಮದ ವಿವಿಧ ಸ್ಥಳಗಳ ಅಧ್ಯಯನಕ್ಕಾಗಿ ತೆರಳುತ್ತಿದ್ದು, ಇವರ ಪ್ರಯಾಣ ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭುಲಿಂಗ ಕುದುರೆ, ಬೀಳ್ಕೊಡುಗೆ ನಮಗಾಗಿ ಏರ್ಪಡಿಸಿದರೂ ಅದು ಇಡೀ ಬೌದ್ದ ಧಮ್ಮಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದ ಅವರು ಇಂದು ನಮಗೆ ಶುಭ ಹಾರೈಸಿರುವ ತಮ್ಮೇಲ್ಲರ ಪ್ರೀತಿ, ವಿಶ್ವಾಸಕ್ಕೆ ತಲೆ ಬಾಗುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವರಾಜ ಕುದುರೆ ಅಧ್ಯಕ್ಷತೆ ವಹಿಸಿದ್ದರು. ಜೈಶ್ರೀ ಕುದುರೆ, ಅಶ್ವಿನಿ ಕುದುರೆ, ಭೀಮಣ್ಣ ಕುದುರೆ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಮಹೇಶ ಗೋರನಾಳಕರ್ ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಅವರ ಬಂಧು ಮಿತ್ರರಾದ ನರಸಪ್ಪ ಕುದುರೆ, ತುಕಾರಾಮ ಕುದುರೆ, ರಮೇಶ ಶಿಂಧೆ, ಲಕ್ಷ್ಮೀ ಒಂಟೆ, ಸತೀಷ ಶಿಂಧೆ, ಅಶೋಕ ದರ್ಗಾ, ಶಂಕರರಾವ ಶಿಂಧೆ, ರಾಜು ವರ್ಮಾ, ಶಿವಮೂರ್ತಿ ಕುದುರೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *