bidar to mailar temple new bus started

ಮೈಲಾರ ಮಲ್ಲಣ್ಣನ ದೇವಸ್ಥಾನಕ್ಕೆ ವಿಶೇಷ ಬಸ್ಸು ಆರಂಭ:

ಪಂಡಿತರಾವ ಚಿದ್ರಿ

bidra to khanapur (mailar ) bus strart today pandith chidari & ksrtc dc (1)ಬೀದರ: ಭಾರತದ ಅತ್ಯಂತ ಶ್ರೀಮಂತ ದೇವಾಲಯವೆಂದೇ ಖ್ಯಾತಿ ಹೊಂದಿದ ಸಿಮಾಂದ್ರ ರಾಜ್ಯದ ತಿರುಪತಿ ತಿಮ್ಮಪ್ಪನಿಗೆ ಏಳು ಕೋಟಿ ಸಾಲ ನೀಡಿರುವ ಮೈಲಾರ ಮಲ್ಲಣ್ಣನ ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕರ್ನಾಟಕ, ತೆಲಂಗಾಣಾ, ಮಹಾರಾಷ್ಟ್ರ, ಗೋವಾ, ಸಿಮಾಂದ್ರ ಸೇರಿದಂತೆ ದೇಶದ ನಾನಾ ಕಡೆಯಿಂದ ಸಹಸ್ರಾರು ಭಕ್ತಾದಿಗಳು ಆಗಮಿಸುವ ಈ ದೇವಸ್ಥಾನದ ವರೆಗೆ ಇಲ್ಲಿಯ ವರೆಗೆ ಬಸ್ ಸೌಕರ್ಯ ಇರಲಿಲ್ಲ. ಈಗ ವಿಶೇಷ ಬಸ್ಸಿನ ವ್ಯವಸ್ಥೆ ನಮ್ಮ ಸರ್ಕಾರ ಮಾಡಿದ್ದು, ಚಾಲನೆ ನೀಡಲಿಕ್ಕೆ ಎನಗೆ ಹರ್ಷ ಎನಿಸಿದೆ ಎಂದು ರಾಜ್ಯದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತರಾವ ಚಿದ್ರಿ ಹೇಳಿದರು.

ಇತ್ತಿಚೀಗೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಈ ವಿಶೇಷ ಬಸ್ಸಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೀದರ್‍ನಿಂದ ದಿನವಿಡಿ ಭಾಲ್ಕಿಗೆ ಸುಮಾರು 100ಕ್ಕೂ ಅಧಿಕ ಬಸ್ಸುಗಳು ಮೈಲಾರದ ಮೇಲಿಂದಲೇ ಹೋಗುತ್ತವೆ, ಆದರೆ ಮಲ್ಲಣ್ಣನ ದೇವಸ್ಥಾನವು ಖಾನಾಪೂರ ಬಸ್ ನಿಲ್ದಾಣದಿಂದ ಬರೋಬ್ಬರಿ ಒಂದು ಕಿ.ಮೀಟರ್ ದೂರ ಇದ್ದು, ಚಿಕ್ಕ ಮಕ್ಕಳು, ವಯಸ್ಸಾದವರು, ವಿಕಲಚೇತನರಿಗೆ ತುಸು ಆಯಾಸಪಡಬೇಕಾಗಿತ್ತು. ಆದರೆ ಇನ್ನು ಮುಂದೆ ಪೂರ್ತಿ ದೇವಸ್ಥಾನದ ಮುಂಭಾಗದ ವರೆಗೆ ಸದ್ಯಕ್ಕೆ ಪ್ರತಿ ದಿನ ಬೆಳಿಗ್ಗೆ 9.00 ಗಂಟೆಯಿಂದ ಇದೇ ಹಳೆ ಬಸ್ ನಿಲ್ದಾಣದಿಂದ ಹೊರಡಲಿರುವ ಈ ಬಸ್ಸಿನ ಸದುಪಯೋಗ ಭಕ್ತಾದಿಗಳು ಮಾಡಿಕೊಳ್ಳುವಂತೆ ಚಿದ್ರಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ ವಿಭಾಗಿಯ ನಿಯಂತ್ರಣಾಧಿಕಾರಿ ಮುನಿಯಲ್ಲಪ್ಪ, ಬೀದರ ಬಸ್ ಘಟಕ ವ್ಯವಸ್ಥಾಪಕ ಭದ್ರಪ್ಪ ಹುಡಗೆ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Sanjevani :

Leave a Reply

Your email address will not be published. Required fields are marked *