Bidar Education Program

11ಬೀದರ111BDR1
ರಚನಾ ಕಾರ್ಯಾಗಾರ
ಫಲಿತಾಂಶದೊಂದಿಗೆ ಶೈಕ್ಷಣಿಕ ಗುಣಮಟ್ಟ ಉತ್ತಮ ಪಡಿಸಲು ಸಲಹೆ
ಬೀದರ: ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶದೊಂದಿಗೆ, ಶೈಕ್ಷಣಿಕ ಗುಣಮಟ್ಟ ಉತ್ತಮ ಪಡಿಸಲು, ಶಿಕ್ಷಕರಿಗೆ ಪ್ರಭಾರಿ ಉಪನಿದೇರ್ಶಕ ಶಿವಕುಮಾರ ಸ್ವಾಮಿ ಸಲಹೆ ನೀಡಿದರು.
ನಗರದ ಉಪನಿರ್ದೇಶಕರ ಕಛೇರಿಯ ಸಭಾ ಭವನದಲ್ಲಿ ಶನಿವಾರ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸುವ ನಿಟ್ಟಿನಲ್ಲಿ, ಗಣಿತ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿವಸದ ಪಠ್ಯ ವಿಷಯದ ಮೇಲಿನ ಪ್ರಶ್ನೆ ಪತ್ರಿಕೆ ರಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿಯೇ ಶೈಕ್ಷಣಿಕವಾಗಿ ಗುರುತಿಸಿಕೊಂಡ ಜಿಲ್ಲೆ ಬೀದರ ಜಿಲ್ಲೆಯಾಗಿದೆ. ಇಲ್ಲಿನ ಮಹಮದ್ ಗವಾನ್ ವಿಶ್ವವಿದ್ಯಾಲಯದಲ್ಲಿ ಹೊರ ದೇಶದ ಅನೇಕರು ಬಂದು ವಿದ್ಯಾಭ್ಯಾಸ ಮಾಡಿರುವ ಇತಿಹಾಸವಿದೆ. ಇಂತಹ ಸ್ಥಳದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವುದ ಶಿಕ್ಷಕರ ಕರ್ತವ್ಯವಾಗಿದೆ. ಬರೀ ಬೋಧನೆಗಿಂತ ವಿದ್ಯಾರ್ಥಿಗಳಿಗೆ ವಿಷಯ ತಲುಪುವ ಕಾರ್ಯವಾಗಬೇಕು. ಇಲ್ಲಿ ಕಲಿಸುವುದಕ್ಕಿಂತ ಕಲಿಯುವುದು ಮುಖ್ಯವಾಗಬೇಕು. ಪ್ರಸ್ತುತ ಸಮಯದಲ್ಲಿ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರು ರಾಜಕೀಯ ಪ್ರವೃತ್ತಿ ಬೆಳೆಸಿಕೊಂಡು ಜಿಲ್ಲೆಯ ಶಿಕ್ಷಣ ಕುಂಠಿತವಾಗುತ್ತಿರುವುದಕ್ಕೆ ಕಾರಣೀಕರ್ತರಾಗುತ್ತಿದ್ದಾರೆ. ಪ್ರೌಢಶಾಲಾ ಶಿಕ್ಷಕರು ಇದರಿಂದ ದೂರವಿರುವುದು ಸಂತಸದ ಸಂಗತಿಯಾಗಿದೆ ಎಂದರು. ಜಿಲ್ಲೆಯ ಫಲಿತಾಂಶ 28 ರಿಂದ 25ನೇ ಸ್ಥಾನಕ್ಕೆ ಏರಿದ್ದು ನಮಗೆ ಸಮಾಧಾನವಿದೆ ಆದರೆ ಸಂತೃಪ್ತಿಯಿಲ್ಲ, ಮುಂಬರುವ ವರ್ಷಗಳಲ್ಲಿ ನಾವು ಹತ್ತರ, ಹತ್ತಿರ ಬರುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಉತ್ತಮ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣಿತ ವಿಷಯ ಪರಿವೀಕ್ಷಕ ನಾಮದೇವ ಸಿಂಗಾರೆ, ಪ್ರಸ್ತುತ ಸಾಲಿನ ಫಿಲಿತಾಂಶ ಸುಧಾರಣೆ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ, ಜಿಲ್ಲೆಯ ಗಣಿತ ವಿಷಯದ ಶಿಕ್ಷಕರಿಗೆ 8ನೆ, 9ನೆ ಮತ್ತು 10ನೇ ತರಗತಿಯ ಗಣಿತ ವಿಷಯದ ಘಟಕವಾರು, ಬೋಧನಾ ಉದ್ದೀಷ್ಟಗಳನ್ನಾಧರಸಿ ಪ್ರಶ್ನೆಕೋಠಿ ಸಿದ್ದಪಡಿಸಲು ಆಯೋಜಿಸಿದ್ದ ತರಬೇತಿ ಶಿಬಿರಕ್ಕೆ ಜಿಲ್ಲೆಯ ಆಯ್ದೆ ಶಿಕ್ಷಕರನ್ನು ಕರೆಯಲಾಗಿದ್ದು, ಎಲ್ಲಾ ಶಿಕ್ಷಕರು ಕಾರ್ಯಾಗಾರಕ್ಕೆ ಆಗಮಿಸಿ ಕಾರ್ಯ ನಿರ್ವಹಿಸಿರುವುದ ಸಂತಸ ತಂದಿದೆ ಎಂದು ಹೇಳಿದರು. ನಂತರ ಎಲ್ಲಾ ಶಿಕ್ಷಕರನ್ನು ಗುಂಪುಗಳಾಗಿ ವಿಂಗಡಿಸಿ ಕಾರ್ಯದ ಹಂಚಿಕೆ ಮಾಡಿದರು. ಅಲ್ಲದೆ ಉತ್ತಮವಾದ ಮಾದರಿ ಪ್ರಶ್ನೆ ಕೋಠಿ ತಯ್ಯಾರಿಸಿಲು ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
ವಿಜ್ಞಾನ ವಿಷಯ ಪರಿವಿಕ್ಷಕ ದಿಗಂಬರರಾವ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಪೂರ್ತಿ ಫೌಂಡೇಶನ್ ಅಧ್ಯಕ್ಷ ಬಾಲಾಜಿ ಪವಾರ, ಹಿರಿಯ ಶಿಕ್ಷಕ ಚನಶೆಟ್ಟಿ ಮೈನಾಳೆ ಉಪಸ್ಥಿತರಿದ್ದರು.
ಬುದ್ಧಪ್ರಿಯಾ ಪ್ರೌಢಶಾಲೆಯ ಶಿಕ್ಷಕ ಶ್ರೀಕಾಂತ ಮೂಲಗೆ ಸ್ವಾಗತಿಸಿದರು. ಸೊಮನಾಥ ಸ್ವಾಮಿ ನಿರೂಪಿಸಿದರು. ಮಹಾತ್ಮಾಗಾಂಧಿ ಪ್ರೌಢಶಾಲೆ ಕಲವಾಡಿಯ ಶಿಕ್ಷಕ ಜಯರಾಜ ದಾಬಶೆಟ್ಟಿ ವಂದಿಸಿದರು.


ಚಿತ್ರ: 11ಬೀದರ1
ಬೀದರ: ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಶನಿವಾರ ಆಯೋಜಿಸಿದ್ದ ಗಣಿತ ಶಿಕ್ಷಕರ ರಚನಾ ಕಾರ್ಯಾಗಾರದಲ್ಲಿ ವಿಷಯ ಪರಿವೀಕ್ಷಕ ನಾಮದೇವ ಸಿಂಗಾರೆ ಮಾತನಾಡಿದರು. ಪ್ರಭಾರಿ ಉಪನಿದೇರ್ಶಕ ಶಿವಕುಮಾರ ಸ್ವಾಮಿ ಇದ್ದರು.
ಚಿತ್ರ: 11ಬೀದರ2
ಬೀದರ: ನಗರದ ಉಪನಿದೇರ್ಶಕರ ಕಛೇರಿಯಲ್ಲಿ ಜರುಗಿದ ಗಣಿತ ಶಿಕ್ಷಕರ ಕಾರ್ಯಾಗಾರದಲ್ಲಿ ಪ್ರಭಾರಿ ಉಪನಿರ್ದೇಶಕ ಶಿವಕುಮಾರ ಸ್ವಾಮಿ ಮಾತನಾಡಿದರು. ನಾಮದೇಶ ಸಿಂಗಾರೆ, ದಿಗಂಬರರಾವ, ಚೆನಶೆಟ್ಟಿ ಮೈನಾಳೆ ಇದ್ದರು.
11ಬೀದರ3
ಬೀದರ: ನಗರದ ಉಪನಿದೇರ್ಶಕರ ಕಛೇರಿಯಲ್ಲಿ ಶನಿವಾರ ಜರುಗಿದ ಗಣಿತ ಶೀಕ್ಷಕರ ಪ್ರಶ್ನೆ ಪತ್ರಿಕೆ ರಚನಾ ಕಾರ್ಯಾಗಾರದಲ್ಲಿ ಶಿಕ್ಷಕರು ಕಾರ್ಯನಿವೃತ್ತರಾಗಿರುವುದು.


 

Leave a Reply

Your email address will not be published. Required fields are marked *