bharat shikshana abhiyan

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ:

ಡಾ.ಆರ್.ಕೆ.ಚಾರಿ

brahat shixana jagrata abhiyan-5...

ಬೀದರ: ವಿದ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿ ಕಟ್ಟಿಕೊಳ್ಳಬೇಕು. ಅದು ಸಫಲವಾಗಲು ಸಾಧನೆಯ ಮೆಟ್ಟಿಲು ಹತ್ತಬೇಕು. ಅದರೂ ಒಂದೊಂದು ಸಲ ಅದು ವಿಫಲವಾದರೂ ಮುಂದೊಂದು ದಿನ ಸಾಧನೆ ಸಾಧಿಸುತ್ತೇವೆಂಬ ಅಚಲ ನಿರ್ಧಾರವಿದ್ದಾಗ ಅಸಾಧ್ಯವಾದುದನ್ನು ಸಾಧಿಸುವ ಸಾಮಥ್ರ್ಯ ಬರುವಲ್ಲಿ ಸಂಶಯವಿಲ್ಲವೆಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ಜೀವನ ಸಧನಾ ಏಜ್ಯುಕೇಶನ್ ಫೌಂಡೇಶನ್ ಉಪಾಧ್ಯಕ್ಷ ಡಾ.ಆರ್.ಕೆ.ಚಾರಿ ಹೇಳಿದರು.

 

ತಾಲೂಕಿನ ಅಣದುರ್ ಗ್ರಾಮದ ಸರ್ವಜ್ಞ  ಪ್ರೌಢಶಾಲೆಯಲ್ಲಿ ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಮತ್ತು ಶ್ರೀ ಸಿದ್ಧಿವಿನಾಯಕ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್‍ಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ಧ ಬೃಹತ್ ಶಿಕ್ಷಣ ಜಾಗೃತಾ ಅಭಿಯಾನದ ಆರನೇ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಜೀವನದಲ್ಲಿ ಸಾಧನೆಯ ಹಾದಿ ಸುಗಮಗೊಳಿಸಿಕೊಳ್ಳಲು ಒಬ್ಬ ಮಹಾ ಪುರುಷನನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು. ಜೀವನದುದ್ದಕ್ಕೂ ಬರುವ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದವರು ತಿಳಿಸಿದರು.

ಜೀವನ ಸಾಧನಾ ಏಜ್ಯುಕೇಶನ್ ಫೌಂಡೇಶನ್ ಟ್ರಸ್ಟ್ ಅದ್ಯಕ್ಷ ನಿತೇಶಕುಮಾರ ಬಿರಾದಾರ ಮಾತನಾಡಿ, ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ, ಆದರೆ ಸಾಧಿಸುವ ಛಲ ಪ್ರತಿಯೊಬ್ಬರಲ್ಲಿ ಬರಬೇಕು, ತಾನು ಹಿಡಿದ ಕಾರ್ಯದಲ್ಲಿ ಧೃಢವಾದ ನಂಬಿಕೆ, ಅಚಲವಾದ ಮನಸ್ಸು, ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ ಎಂದವರು ಹೇಳಿದರು.

ವೇದಿಕೆ ಮೇಲೆ ಗ್ರಾಮ ವಿಕಾಸ ಶಿಕ್ಷಣ ಮತ್ತು ದತ್ತಿ ಪ್ರತಿಷ್ಟಾನದ ಅಧ್ಯಕ್ಷ ಸಂಗ್ರಾಮಪ್ಪ ಬಶೆಟ್ಟಿ, ಬಿವಿಬಿ ಕಾಲೇಜಿನ ಉಪನ್ಯಾಸಕ ಸಂತೋಷ ರೈಕೋಟಿ ವೇದಿಕೆ ಮೇಲಿದ್ದರು.

ಆರಂಭದಲ್ಲಿ ಶಾಲೆಯ ವಿದ್ಯಾರ್ಥಿನಿ ಕು.ಅಂಬಿಕಾ ಸ್ವಾಗತ ಗೀತೆ ಹಾಡಿದರು. ಶಾಲೆಯ ಮುಖ್ಯ ಗುರು ಬಸವರಾಜ ಬಶೆಟ್ಟಿ ಸ್ವಾಗತ ಕೋರಿದರೆ, ಸಹ ಶಿಕ್ಷಕ ಸಂಜೀವಕುಮಾರ ರೇಖಿ ನಿರೂಪಿಸಿದರು. ಶಿಕ್ಷಕಿ ಹೇಮಾ ವಟ್ಟಿ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ  ಶಾಲೆಯ ಸಹ ಶಿಕ್ಷಕರುಗಳಾದ ಜಗನ್ನಾಥ, ಸುರೇಶ, ತುಕಾರಾಮ, ಮಮತಾ, ಸುನಿತಾ ಸೇರಿದಂತೆ ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *