Balvikas Academy

ಮದ್ರಾಸ್ ಹೈಕೋರ್ಟ್ ಕ್ರಮಕ್ಕೆ ಬಾಲವಿಕಾಸ ಅಕಾಡೆಮಿ ಸಂತಸ

ಬೀದರ: ಮಕ್ಕಳ ಮೇಲೆ ಅತ್ಯಾಚಾರವೆಸಗುವ ದೂರ್ಥರಿಗೆ ಪುರುಷತ್ವ ಹರಣ ಶಿಕ್ಷೆ ನೀಡುವಂತೆ ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಇಂದು ರಾಜಾ ರೋಷವಾಗಿ ದೇಶದೆಲ್ಲಡೆ ಮಕ್ಕಳ ಮೇಲೆ ಅತ್ಯಾಚಾರ, ಅನಾಚಾರ, ದೌರ್ಜನ್ಯಗಳಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇಂತಹ ಘೋರ ಘಟನೆಗಳ ಬಗ್ಗೆ ಮಾಧ್ಯಮಗಳು ಸಾಕಷ್ಟು ಸುದ್ದಿ ಬಿತ್ತರಿಸಿದರೂ ಸಹ ಯಾವುದೆ ಪ್ರಯೋಜನವಾಗಲಿಲ್ಲ, ಎಷ್ಟೋ ಆರೋಪಿಗಳಿಗೆ ಅನೇಕ ನ್ಯಾಯಾಲಯಗಳು ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ವಿಧಿಸಿದರೂ, ಅಷ್ಟು ಪರಿಣಾಮ ಬೀರುತ್ತಿಲ್ಲವಾದ್ದರಿಂದ ಇಂದು ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪೂ ಸೂಕ್ತವಾಗಿದ್ದು, ಇಂತಹ ಭೀಕರ ಶಿಕ್ಷೆ ನೀಡಿದರೆ ಮುಂದೆ ಇಂತಹ ಘಟನೆಗಳು ಮರುಕಳಿಸಲು ಅಸಾಧ್ಯವಾಗಲಿದ್ದು, ಇಂತಹ ಬೆಳವಣಿಗೆಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್ ಹಾಗೂ ಶಾಮರಾವ ನೆಲವಾಡೆ ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *