ashok kheny visit to protest place

ಅನ್ನದಾತನ ರಕ್ಷಣೆಗೆ ವಿಧಾನ ಸಭೆ

ಓಳಗು-ಹೊರಗೂ ಕೋರಾಟ ನಿರಂತರ: ಖೇಣಿ

ashok khent wisit to protest place

 

ಬೀದರ: ಜಿಲ್ಲೆಯ ಅನ್ನದಾತರ ರಕ್ಷಣೆಗಾಗಿ ವಿಧಾನ ಸಭೆ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಹಾಗೂ ರೈತರ ಹೋರಾಟದಲ್ಲಿ ಭಾಗಿಯಾಗಿ, ಅವರ ಪರವಾಗಿ ತನ್ನ ಉಸಿರಿರುವ ತನಕ ಹೋರಾಡುತ್ತೇನೆಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ ಖೇಣಿ ಹೇಳಿದರು.

 

ರವಿವಾರ ಬೆಳಿಗ್ಗೆ ನಗರದ ಜಿಲ್ಲಾಧಿಕಾರಿ ಪ್ರಾಂಗಣದಲ್ಲಿ ಕಳೆದ ಮೂರ್ನಾಲ್ಕು ದಿವಸಗಳಿಂದ ಅನಿರ್ದಾಷ್ಟಾವಧಿ ಮುಷ್ಕರ ನಿರತ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರ ಬಳಿ ತೆರಳಿ, ಮನವಿ ಸ್ವೀಕರಿಸಿದ ನಂತರ ಮಾತನಾಡಿ, ತಾನೂ ಸಿಎಂ ಸಿದ್ಧರಾಮಯ್ಯನವರನ್ನು ಭೇಟಿಯಾಗಿ ಜಿಲ್ಲೆಯ ರೈತರ ಸಮಸ್ಯಗಳ ಬಗ್ಗೆ ಚರ್ಚೆ ನಡೆಸಿದರೂ ಯಾವುದೆ ಪ್ರಯೋಜನ ಆಗಲಿಲ್ಲ. ಕಳೆದ ತಿಂಗಳ 15ರಂದು ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ರಾಜ್ಯ ಸರ್ಕಾರ ಘೋಷಿಸಿದರೂ ಇಲ್ಲಿಯ ವರೆಗೆ ಬರ ಪರಿಹಾರದ ಸುಳಿವು ಸಿಗದಿರುವುದು ದೂರ್ಥ ಸಂಗತಿಯಾಗಿದ್ದು, ಜಿಲ್ಲೆಯ ಎಲ್ಲ 6 ಜನ ಶಾಸಸಕರೂ ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರೊಡಗೂಡಿ ಮತ್ತೊಮ್ಮೆ ಮುಖ್ಯಮಂತ್ರಿಗಳಿಗೆ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ಕೊಡಲಾಗುವುದು, ಯಾರೊಬ್ಬ ಶಾಸಕರು ಹಾಗೂ ಜನ ಪ್ರತಿನಿಧಿಗಳು ಸಿಎಂ ಬಳಿ ಬರದಿದ್ದರೂ ತಾನೂ ಮಾತ್ರ ಈ ವಿಚಾರವಾಗಿ ಸುಮ್ಮನೆ ಕೂಡುವುದಿಲ್ಲ, ನಿರಂತರ ಹೋರಾಟ ನಡೆಸುವುದಾಗಿ ತಿಳಿಸಿದರು.

ರೈತರ ಎಲ್ಲ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ಹಾಗೂ ಬರ ಪರಿಹಾರ ಶೀಘ್ರ ಕೊಡುವುದು ಜೊತೆಗೆ ಈ ಹಂಗಾಮಿನಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ನಿಗದಿತ ಸಮಯದಲ್ಲಿ ಆರಂಭವಾಗಿ ನಿಗದಿತ ಸಕ್ಕರೆ ಉತ್ಪಾದಿಸುವುದು ಹಾಗೂ ರೈತರ ಬಾಕಿ ಹಣ ಕೊಡುವುದು ಸೇರಿದಂತೆ ರೈತರ ಜ್ವಲಂತ ಸಮಸ್ಯಗಳ ಕುರಿತಾದ ಮನವಿಯನ್ನು ಅಶೋಕ ಖೇಣಿಯವರಿಗೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾ,ಮಿ, ಜಿಲ್ಲಾ ಕಾರ್ಯದರ್ಶಿ ವೈಜಿನಾಥ ನೌಬಾದೆ, ಮಾಧ್ಯಮ ಪ್ರತಿನಿಧಿ ದಯಾನಂದ ಸ್ವಾಮಿ, ಪ್ರಮುಖರಾದ ಸಿದ್ರಾಮಪ್ಪ ಅಣದುರೆ, ಬಾಬುರಾವ ಜೋಳದಾಬಕಾ, ಈರಪಣ್ಣ ದುಬುಲಗುಂಡಿ, ಖಾಸಿಮ್ ಅಲಿ, ಶಾಮರಾವ ಬಾವಗಿ, ಈಸಾಕ್ ಮಿಯಾ ವಾಗಲಗಾಂವ, ಓಂಕಾರ ಪಾಟೀಲ, ವಕೀಲರಾದ ಚಲವಾ, ವೆಂಕಪ್ಪ ಸೇರಿದಂತೆ ಜಿಲ್ಲೆಯ ಹಲವಾರು ರೈತ ಬಾಂಧವರು ಇದ್ದರು.

Leave a Reply

Your email address will not be published. Required fields are marked *