anustan prg nirna

ನೀರ್ಣಾದಲ್ಲಿ ಚಿಂಚೋಳಿ ಶ್ರೀಗಳ ಮಹಾನುಷ್ಟಾನಾರಂಭ

anustan prgm in nirna villageಬೀದರ: ಹುಮನಾಬಾದ್ ತಾಲೂಕಿನ ನೀರ್ಣಾ ಗ್ರಾಮz ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್ 15ರಿಂದ ಸೆಪ್ಟೆಂಬರ್ 14ರ ವರೆಗೆ ಖಟಕ ಚಿಂಚೋಳ್ಳಿ ಹಿರೆಮಠ (ಹುಗ್ಗೆಳ್ಳಿ ಮಠ) ಪೂಜ್ಯ ಬಸವಲಿಂಗ ದೇವರಿಂದ ಲೋಕ ಕಲ್ಯಾಣಕ್ಕಾಗಿ ಮಹಾನುಷ್ಠಾನ ಜರುಗುತ್ತಿದೆ.
ಈ ಸಂಭಂದ ಆಗಸ್ಟ್ 15ರಿಂದ ಪ್ರತಿ ನಿತ್ಯ ಬೆಳಿಗ್ಗೆ ಹಾಗೂ ಮಧ್ಯಾಹ್ನ ರುದ್ರಾಭಿಷಕ, ನಂತರ ಮಂಗಳಾರತಿ, ತದನಂತರ ಮಹಾಪ್ರಸಾದ, ರಾತ್ರಿಯಿಡಿ ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಿತ್ಯದ ಪಾರಾಮಾರ್ಥಿಕ ಕಾರ್ಯಕ್ರಮಗಳಾಗಿವೆ.

ಈ ತಿಂಗಳ 14ರಂದು ಮಹಾನುಷ್ಟಾನದ ಮಂಗಳ ಕಾರ್ಯಕ್ರಮ ಜರುಗುತ್ತಿದ್ದು, ಸಹಸ್ರಾರು ಭಕ್ತವೃಂದ ಸೇರುವ ನಿರಿಕ್ಷೆ ಇದೆ. ರಾಜ್ಯದ ಹಲವು ಜಿಲ್ಲೆಗಳ, ನೆರೆಯ ತೆಲಂಗಾಣಾ, ಮಹಾರಾಷ್ಟ್ರ ಹಾಗೂ ಇತರೆಡೆಗಳಿಂದ ಜನ ಸೇರಲಿದ್ದು, ಜಿಲ್ಲೆಯ ಸದ್ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಈ ಭವ್ಯ ಸಮಾರಂಭ ಯಶಸ್ವಿಳಿಸಬೇಕೆಂದು ನೀರ್ಣಾ ಗ್ರಾಮದ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Reporter : Mr.Shivkumar Swamy

Leave a Reply

Your email address will not be published. Required fields are marked *