Animal Ambulance Facility

ಗೋವುಗಳ ಆರೊಗ್ಯ ಸಂರಕ್ಷಣೆಗೆ

ಮಂಡಳಿಯಿಂದ ಆ್ಯಬುಲೇನ್ಸ್ ಸೇವೆ

22.bidar-1ಬೀದರ: ಹಲವು ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನ ಪಡೆಯದೇ ನಿಸ್ವಾರ್ಥಿಯಾಗಿ ಹಾಗೂ ಸಾರ್ವಜನಿಕವಾಗಿ ಗೋಶಾಲೆ ನಡೆಸುವ ಕೇಂದ್ರಕ್ಕೆ ನಮ್ಮ ಮಂಡಳಿಯಿಂದ ಸುಮಾರು 5 ಲಕ್ಷ ರು.ವೆಚ್ಚದಲ್ಲಿ ಆ್ಯಂಬುಲೇನ್ಸ್ ಸೇವೆ, ಜೊತೆಗೆ ಗೋವುಗಳ ಆಶ್ರಯಕ್ಕಾಗಿ ಸೆಲ್ಟರ್ ಹೌಸ್ ನಿರ್ಮಾಣಕ್ಕಾಗಿ ರು.3 ಲಕ್ಷ ಅನುದಾನ  ಒದಗಿಸಲಾಗುತ್ತಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಸ್ಪಷ್ಟಪಡಿಸಿದರು.

ನೆರೆಯ ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ನಾರಾಯಣಪೂರ ತಾಲೂಕಿನ ರತ್ನಾಪೂರ ಗ್ರಾಮದಲ್ಲಿರುವ ಶ್ರೀಕೃಷ್ಣ ಆರ್ಜುನ್‍ಗಿರಿ ಮಹಾರಾಜರ ಆಶ್ರಮದಲ್ಲಿ ಸೋಮವಾರ ಇಲ್ಲಿಯ ಗೋಶಾಲೆಗೆ ಮಂಜುರಿಯಾದ ರು.10.000 ಹಣದ ಆದೇಶ ಪತ್ರ ಹಾಗೂ ಮಾನ್ಯತೆ ಪ್ರಮಾಣ ಪತ್ರವನ್ನು ಪೂಜ್ಯ ಸಂತ ಆರ್ಜುನ್‍ಗಿರಿ ಮಹಾರಾಜರಿಗೆ ಹಸ್ತಾಂತರಿಸಿ, ಮಾತನಾಡುತ್ತಿದ್ದರು.

ದೇಶದ ಪ್ರತಿಯೊಂದು ಗಡಿ ಪ್ರದೇಶದಲ್ಲಿ ಆಕ್ರಮ ಗೋ ಸಾಗಣೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಇನ್ನು ಮುಂದೆ ಗೋಹತ್ಯೆ ಮಾಡುವವರನ್ನು ಸಹ ದಂಡಿಸುವ ನಿಟ್ಟಿನಲ್ಲಿ ನಮ್ಮ ಮಂಡಳಿ ಮುಂದಾಗಿದೆ ಎಂದು ಹೇಳಿ, ಆಕ್ರಮ ಗೋ ಸಾಕಣೆ ಕಂಡು ಬಂದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರುವಂತೆ ಶಿವಯ್ಯ ಕೋರಿದರು.

ಕಳೆದ ಹತ್ತು ವರ್ಷಗಳಿಂದ ಪೂಜ್ಯ ಆರ್ಜುನ್‍ಗಿರಿ ಮಹಾರಾಜರು ಸುಮಾರು 100ಕ್ಕೂ ಅಧಿಕ ಗೋವುಗಳ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆ ಮಾಡಿ, ಈ ಭಾಗದಲ್ಲಿ ಕ್ರಾಂತಿ ಮಾಡಿದ್ದನ್ನು ಮನಗಂಡು, ನಮ್ಮ ಮಂಡಳಿಯು ಈಗಾಗಲೇ ಮೊದಲ ಕಂತಿನ 10 ಸಾವಿರ ಹಣ ಜೊತೆಗೆ 10 ಸಾವಿರ ವೈದ್ಯಕಿಯ ಖರ್ಚು ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ 3 ಲಕ್ಷ ಗೋ ಸಂರಕ್ಷಣಾ ಅನುದಾನ, 5 ಲಕ್ಷ ರು. ವೆಚ್ಚದಲ್ಲಿ ಆ್ಯಂಬುಲೇನ್ಸ್ ವ್ಯವಸ್ಥೆ ಹಾಗೂ 3 ಲಕ್ಷದಲ್ಲಿ ಸೆಲ್ಟರ್ ಹೌಸ್ ನಿರ್ಮಿಸುವ ಗುರಿ ಹೊಂದಲಾಗಿದ್ದು, ಮುಂದಿನ ಎರಡು ವರ್ಷಗಳ ತನ್ನ ಅಧಿಕಾರದ ಅವಧಿಯಲ್ಲಿ ಈ ಸಂಕಲ್ಪ ಪರಿಪೂರ್ಣ ಮಾಡುವುದಾಗಿ ಘೋಷಿಸಿದರು.

ಮಂಡಳಿಯಿಂದ ಪ್ರಮಾಣ ಪತ್ರ ಹಾಗೂ 10 ಸಾವಿರ ಆದೇಶ ಪತ್ರ ಸ್ವೀಕರಿಸಿದ ಪೂಜ್ಯ ಆರ್ಜುನ್‍ಗಿರಿ ಮಹಾರಾಜರು ಮಾತನಾಡಿ, 2008ರಲ್ಲಿ ಆಶ್ರಮದಲ್ಲಿ ಗೋ ಸಂರಕ್ಷಣೆಗೆ ಬುನಾದಿ ಹಾಕಲಾಗಿ, ಈಗ ಅವುಗಳ ಸಂಖ್ಯೆ ನೂರರ ಗಡಿ ದಾಟಿದ್ದು, ಕಳೆದ ಮೂರು ವರ್ಷಗಳ ಬರ ಪರಿಸ್ಥಿತಿಯಲ್ಲೂ ಅವುಗಳ ಸಂರಕ್ಷಣೆಗೆ ಇಲ್ಲಿಯ ಭಕ್ತರು ಸಾಥ ನೀಡಿದ್ದು ಶ್ಲಾಘನಿಯ ಕಾರ್ಯವೆಂದ ಅವರು, ಈ ಸಂದರ್ಭದಲ್ಲಿ ಲಕ್ಷ ಗಟ್ಟಲೆ ಹಣ ಖರ್ಚು ಮಾಡಿ, ಗಣೇಶ ವಿಸರ್ಜಿಸುವವರು ಸ್ವಲ್ಪ ಹಣ ವಿಸರ್ಜಿನೆಗೆ ಬಳಿಸಿ, ಹೆಚ್ಚಿನ ಹಣವನ್ನು ಇಂತಹ ಗೋವುಗಳ ಸಂರಕ್ಷಣೇಗಾಗಿ ಅಥವಾ ಗ್ರಾಮದ ಸರ್ವಾಂಗಿಣ ವಿಕಾಸಕ್ಕಾಗಿ ಖರ್ಚು ಮಾಡುವಂತೆ  ಕಿವಿ ಮಾತು ಹೇಳಿ, ಗಣೇಶನ ಹೆಸರಿನಲ್ಲಿ ಸಾವಿರಗಟ್ಟಲೆ ಹಣ ವ್ಯಯಿಸಿ ಲಡ್ಡು ಖರಿದಿ ಮಾಡುವವರನ್ನು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿ, ಈ ಭಾಗದಲ್ಲಿ ಎಲ್ಲ ಮಠಾಧೀಶರು ಶಿಕ್ಷಣದ ಹೆಸರ;ಲ್ಲಿ ಹಣ ಮಾಡಲು ಹೊರಟರೇ, ಆರ್ಜುನ್‍ಗಿರಿ ಮಹಾರಾಜರು ಒಂದು ಪೈಸೆ ಸಹ ಚಂದಾ ಮಾಡದೇ, ಗೋ ಸಂರಕ್ಷಣೆ ಮಾಡುವ ಮೂಲಕ ಈ ಭಾಗಕ್ಕೆ ಮಾದರಿ ಪ್ರಾಯರಾಗಿದ್ದಾರೆ ಎಂದು ಪ್ರಶಂಸಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ವೈಜಿನಾಥ ನೌಬಾದೆ ಹಾಗೂ ಸ್ಥಳಿಯ ಅಕ್ಕಮಹಾದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶಕುಂತಲಾಬಾಯಿ ಮಾತನಾಡಿದರು.
ಅಲ್ಲಿಯ ಟ್ರಸ್ಟ್ ಉಪಾಧ್ಯಕ್ಷ ವೀರಶೆಟ್ಟಿ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಾಂತಮ್ಮ ಮೂಲಗೆ, ಸಕ್ಕುಬಾಯಿ ಸೇರಿದಂತೆ ಸ್ಥಳಿಯ ಇತರೆ ಮುಖಂಡರು, ಯುವಜನರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *