8 Crore Budget for Activites

ಸುರಪುರ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2014-15ನೇ ಸಾಲಿನಲ್ಲಿ ನಾನಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿದ್ದು, 8 ಕೋಟಿ ಮೌಲ್ಯದ ಕ್ರಿಯಾ ಯೋಜನೆ ಸಿದ್ಧಪಡಿಸಲು ಸಭೆ ಒಪ್ಪಿಗೆ ಸೂಚಿಸಿತು.ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ನೂತನ ಅಧ್ಯಕ್ಷ ಹಣಮಂತ್ರಾಯ ಶುಕ್ಲಾ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಕೆಂಭಾವಿ, ಖಾನಾಪುರ ಎಸ್.ಎಚ್, ಹುಣಸಗಿ ಹಾಗೂ ಹಸನಾಪುರ ಎಪಿಎಂಸಿ ಪ್ರಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿಶ್ವಯಿಸಲಾಯಿತು.ಕೃಷಿ ಮಾರುಕಟ್ಟೆಯಲ್ಲಿ ಆರ್.ಕೆ. ಯೋಜನೆ ಅಡಿಯಲ್ಲಿ 100 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಾಣಕ್ಕೆ ಟೆಂಡರ್ ಕರೆದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಹಮಾಲರ ಸಂಘದ ಶ್ರಮಿಕ ಭವನ

ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಕಾಂಪೌಂಡ್ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಮಾಜಿ ಅಧ್ಯಕ್ಷ ಚಂದ್ರಶೇಖರ ದಂಡಿನ ಒತ್ತಾಯಿಸಿದರು. ಸುದೀರ್ಘ ಚರ್ಚೆ ನಂತರ ಒಪ್ಪಿಗೆ ನೀಡಿದರು.ಮಾರುಕಟ್ಟೆಯ ಆದಾಯ ಹೆಚ್ಚಳಕ್ಕೆ ಕರ ವಸೂಲಾತಿಯಲ್ಲಿ ಪಾರದರ್ಶಕತೆ ತರಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲ ಕಡೆಯೂ ತನಿಖಾ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಸದ್ಯಸ್ಯರು ಸಲಹೆ ನೀಡಿದರು.ಕೆಂಭಾವಿ ಉಪ ಮಾರುಕಟ್ಟೆಗೆ ಕಾಂಪೌಂಡ್, ವಿದ್ಯುತ್ ಪರಿವರ್ತಕ ಅಳವಡಿಕೆ, 24 ಎಕರೆ ಭೂಮಿಯ ಸಮತಟ್ಟು, ವೇ ಬ್ರೀಜ್, 100 ನಿವೇಶನಗಳನ್ನು ಗುರುತಿಸಿ ಅಂಗಡಿ ಗೋದಾಮುಗಳ ನಿರ್ಮಿಸುವುದು. ಹಸನಾಪುರ ಉಪ ಮಾರುಕಟ್ಟೆಯಲ್ಲಿ ರಸ್ತೆ ಡಾಂಬರೀಕರಣ, ವಿದ್ಯುತ್ ಪರಿವರ್ತಕ ಅಳವಡಿಕೆ, ಕಕ್ಕೇರಿ ಹಾಗೂ ಗೆದ್ದಲಮರಿ ಗ್ರಾಮಗಳಲ್ಲಿ ಸಂತೆ ಕಟ್ಟೆ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳ ಕ್ರಿಯಾಯೋಜನೆ ಸಿದ್ಧಪಡಿಸಲು ತಿರ್ಮಾನಿಸಲಾಯಿತು.ಉಪಾಧ್ಯಕ್ಷ ಮಲ್ಲಣ್ಣ ಹಗ್ಗೇರಿ, ಸದಸ್ಯರಾದ ಪರಮಣ್ಣ ಹಾಲಭಾವಿ, ರೇಖಾ ಕಡ್ಲೂರು, ರುದ್ರಗೌಡ ಕೋನಾಳ, ಭೀಮಪ್ಪ ವಡ್ಡರ್, ಸಂಗಮ್ಮ, ಎನ್.ಎಚ್. ಲಿಯಾಖತ್, ವಾಮನರಾವು ದೇಶಪಾಂಡೆ, ನೇತಾಜಿ ಗೌಡ, ಕಾರ್ಯದರ್ಶಿ ಆರ್.ಎನ್. ಕಿತ್ತೂರು, ಉಪ ಕಾರ್ಯದರ್ಶಿ ಆರ್.ಎಂ. ಲೋಣಿ, ಸಿಬ್ಬಂದಿ ರಂಗನಾಥ ಗುಡಗುಂಟಿ, ರಿಯಾಜ ಅನ್ಸಾರಿ, ಗೋಪಾಲ ಮಾಳದಕರ ಇದ್ದರು.

 

Leave a Reply

Your email address will not be published. Required fields are marked *