Daily Archives: August 15, 2017

krishna Janmastami in siddharrodh school

ಶ್ರೀ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವೈಭವದಿಂದ ಆಚರಣೆ.

ಇಂದು ನಗರದ ಶ್ರೀ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಕೃಷ್ಣನ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖ ಹಬ್ಬವಾಗಿದ್ದು. ಕೃಷ್ಣನ ಹುಟ್ಟಿದ ದಿನವನ್ನ ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿಯಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಜನ್ಮದಿನವನ್ನ ಚಂದ್ರಮಾನ ರೀತಿಯಲ್ಲಿ ಶ್ರಾವಣ ಮಾಸದ ಪವಿತ್ರ ದಿನಗಳಲ್ಲಿ ಈ ಹಬ್ಬವಾಗಿ ಆಚರಣೆ ಮಾಡಲಾಗುತ್ತಿದೆ. ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿರುವ ಎನ್.ಕೆ. ಜಾಬಶೇಟ್ಟಿ ಆಯುರ್ವೇದಿಕ ಮಹಾ ವಿದ್ಯಾಲಯದ ಸಂಸ್ಕøತ ಉಪನ್ಯಾಸಕರಾದ ಶ್ರೀ ಪರಮೇಶ್ವರ ಭಟ್ಟ ತಮ್ಮ ಕಮಲ ಹಸ್ತದಿಂದ ಜ್ಯೋತಿ ಪ್ರಜ್ವಲಗೊಳಿಸುವ ಮತ್ತು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಚಿಕ್ಕ ಪುಟಾಣಿ ವಿದ್ಯಾರ್ಥಿಗಳು ಶ್ರೀ ಕೃಷ್ಣನ ಹಾಡನ್ನು ಹಾಡುವ ಮೂಲಕ ವಿದ್ಯಾರ್ಥಿಗಳಿಗು ಅಥಿತಿಗಳಿಗು ಹಾಗೂ ಶಾಲೆಯ ಪಾಲಕರಿಗೆ ಸ್ವಾಗತ ಕೊರಿದರು.
ಈ ಒಂದು ಕಾರ್ಯಕ್ರಮವನ್ನ ಶಾಲೆಯ ಸೂಮಾರು 300 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷ ಧರಿಸಿಕೊಂಡಿದ್ದು ವಿಶಿಷ್ಟವಾಗಿತ್ತು. ವಿದ್ಯಾರ್ಥಿಗಳು ವಿವಿಧ ಧರ್ಮಜಾತಿಯವರು ಆಗಿದ್ದುರು ಲೇಕ್ಕಿಸದೆ ವೇಷ ಧರಿಸಿರುವುದು ಕಾರ್ಯಕ್ರಮದಲ್ಲಿ ನೆರೆದಿರುವ ಪಾಲಕರಿಗೆ ಅತೀವ ಸಂತೋಷ ತಂದುಕೊಟ್ಟಿತ್ತು.