Daily Archives: March 22, 2016

Annual Day Celebration In Saptagiri School

ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ:

ಮಂಗಲಾ ಮರಕಲೆ


Annual Day Celebration In Saptagiri Schoolಬೀದರ: ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವಂತೆ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಮಂಗಲಾ ಮರಕಲೆ ಹೇಳಿದರು.
ಇತ್ತಿಚೀಗೆ ನಗರದ ಶರಣ ನಗರದಲ್ಲಿನ ಸಪ್ತಗಿರಿ ಶಾಲೆಯ ಅವರಣದಲ್ಲಿ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ದೇಶ ಕಾಯುವ ಸೈನಿಕರು ಕಣ್ಣಲ್ಲಿ ಕಣ್ಣಿಟ್ಟು ದೇಶ ಕಾಯುವ ಹಾಗೆ ವಿದ್ಯಾರ್ಥೀಗಳು ಕೂಡ ಕಣ್ಣಲ್ಲಿ ಕಣ್ಣಿಟ್ಟು ಎಕಾಗೃತೆಯಿಂದ ಓದಲು ತಿಳಿಸಿದರು,
ಮುಖ್ಯ ಅತಿಥಿಗಳಾಗಿ ಸಪ್ತಗಿರಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಗೋವಿಂದ ತಾಂದಳೆ ಮಾತನಾಡಿ, ಯಾವ ವಿದ್ಯಾರ್ಥೀ 90% ಪ್ರತಿಷತ ಅಂಕ ಗಳಿಸುತ್ತಾನೋ ಅಂಥವರಿಗೆ ಲ್ಯಾಪ್‍ಟಾಪ್ ಕೊಡಲಾಗುವುದು ಎಂದು ತಿಳಿಸಿದರು
ಅತಿಥಿಗಳಾಗಿ ಜೀವಶಾಸ್ತ್ರ ಉಪನ್ಯಾಶಕ ಅನಿಲ ಜಾಧವ, ಭೌತಶಾಸ್ತ್ರ ಉಪನ್ಯಾಸಕ ಶ್ರೀಕಾಂತ ರೆಡ್ಡಿ ಹಾಗೂ ಸಪ್ತಗಿರಿ ಪ್ರೌಢಶಾಲೆ ಮುಖ್ಯ ಗುರು ಪ್ರೀತಿ ತಾಂದಳೆ ಮಾತನಾಡಿದರು.
ಶಾಲೆಯ ಎಲ್ಲ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.


 

Renukacharya Jayanthi

ರೇಣುಕಾಚಾರ್ಯರ ಜಯಂತಿ:

ರೋಗಿಗಳಿಗೆ ಹಣ್ಣು ಹಂಪಲು ವಿತರಣೆ


Fruit Distribution on Renukacharya Jayanthi in Govt Hospital 1
ಬೀದರ: ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ ನಿಮಿತ್ಯ ಜಿಲ್ಲಾಸ್ಪತ್ರೆ ಅವರಣದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ಅಲ್ಲಿಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಗಂಗಾಧರ ಶಿವಾಚಾರ್ಯ ಸ್ವಾಮಿಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇಂದು ರೇಣುಕಾದಿ ಪಂಚಾಚಾರ್ಯರ ಯುಗಮಾನೋತ್ಸವವನ್ನು ಜಿಲ್ಲೆಯಲ್ಲಡೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದು, ರೇಣುಕಾಚಾರ್ಯರ ಉದ್ದೇಶದಂತೆ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಕರುಣಿಸುವ ಆ ಭಗವಂತನು ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲಿ ಎಂದು ಹರಿಸಿದರು.
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಹಾಗೂ ಖ್ಯಾತ ಚರ್ಮರೋಗ ತಜ್ಞ ಡಾ.ಅಶೋಕಕುಮಾರ ನಾಗುರೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ರೇಣುಕಾಚಾರ್ಯರು ಯಾರೊಬ್ಬರ ಆಸ್ತಿಯಲ್ಲ, ಅವರು ಇಡೀ ವಿಶ್ವದ ಆಸ್ತಿ, ವಿಶ್ವವು ಧರ್ಮದ ತಳಹದಿಯಲ್ಲಿ ನೆಲೆಸಿದರೆ ಅದುವೆ ಸತ್ಯಾರ್ಥ ಎಂದವರು ಹೇಳಿದರು.
ನೂತನ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೀದರ್ ವೈದ್ಯಕಿಯ ವಿಜ್ಞಾನಗಳ ಸಂಸ್ಥೆ ಅಧಿಕ್ಷಕ ಡಾ.ಶಿವಕುಮಾರ ಶಟಕಾರ ಅಧ್ಯಕ್ಷತೆ ವಹಿಸಿದರು.
ಡೆನ್ ಕಮ್ಯುನಿಕಜೇಶನ್ ಮಾಲಿಕರಾದ ರವಿ ಸ್ವಾಮಿ, ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ದ ಶಿವಕುಮಾರ ಸ್ವಾಮಿ, ಗಾದಗಿ ಗ್ರಾಮ್ ಪಂಚಾಯತ್ ಸದಸ್ಯ ವರದಯ್ಯ ಸ್ವಾಮಿ, ಮುಧೋಳ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಕಾಂತ ಸ್ವಾಮಿ, ಪ್ರಮುಖರಾದ ಶ್ರೀಕಾಂತ ಸ್ವಾಮಿ, ಶಿವಕುಮಾರ ಸ್ವಾಮಿ ಬಂಬುಳಗಿ, ಸಂಜೀವಕುಮಾರ ಕಾರಗಾ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.