Daily Archives: November 20, 2015

Vanabhojana in basvagiri

ಸಂಸ್ಕಾರದಿಂದ ಸಚ್ಚಾರಿತ್ರ್ಯೆ ನಿರ್ಮಾಣ: ಅಕ್ಕ ಅನ್ನಪೂರ್ಣ

Vana Bhojana 3ಬೀದರ: ಮಕ್ಕಳಲ್ಲಿ ಸಂಸ್ಕಾರ, ಸಂಸ್ಕøತಿ ಬೇರೂರಿದಲ್ಲಿ ಉತ್ತಮ ಚಾರಿತ್ರ್ಯೆ ನಿರ್ಮಾಣವಾಗಲು ಸಾಧ್ಯವಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಅಕ್ಕ ಅನ್ನಪೂರ್ಣ ತಿಳಿಸಿದರು.
ಗುರುವಾರ ನಗರದ ಬಸವಗಿರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಮಕ್ಕಳ ರಕ್ಷಣಾ ಘಟಕಗಳ ಸಹಯೊಗದಲ್ಲಿ ಮಕ್ಕಳ ದಿನಾಚರಣೆ ಸಪ್ತಾಹದ 6ನೇ ದಿವಸದ ವನಭೋಜನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

Children day in shagung

ಅಂಗನವಾಡಿಗಳು ಮಕ್ಕಳ ಸಂಸ್ಕಾರ ಕೇಂದ್ರಗಳಾಗಬೇಕು: ಗೌಸ್

childrens day in shagungಬೀದರ: ಅಂಗನವಾಡಿ ಕೇಂದ್ರಗಳು ಬರೀ ಹೆಸರಿಗೆ ಮಾತ್ರ ಸೀಮಿತವಾಗದೆ, ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಸಂಸ್ಕಾರ ಕೇಂದ್ರಗಳಾಗಬೇಕೆಂದು ನಗರ ಸಭೆ ಸದಸ್ಯ ಮಹಮ್ಮದ್ ಗೌಸ್ ಹೇಳಿದರು.
ನಗರದ ಶಹಾಗಂಜ್‍ನಲ್ಲಿನ ಅಂಗನವಾಡಿ ಕೇಂದ್ರವೊಂದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಇತ್ತಿಚೀಗೆ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

National Award

ನ.21ರಂದು ಮುಖ್ಯಮಂತ್ರಿ ಚಂದ್ರು ಅವರಿಗೆ ಗೋ.ರು.ಚ ರಾಷ್ಟ್ರೀಯ ಪ್ರಶಸ್ತಿ

DSC_3922ಬೀದರ: ಈ ತಿಂಗಳ 21ರಂದು ನಗರದ ರಂಗಮಂದಿರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದಿಂದ ಡಾ.ಮುಖ್ಯಮಂತ್ರಿ ಚಂದ್ರು ಅವರಿಗೆ ಮೊದಲ ವರ್ಷದ ಡಾ.ಗೋರುರು ಚನ್ನಬಸಪ್ಪ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು, ಪ್ರಶಸ್ತಿ ಜೊತೆಗೆ 51.000 ರಯಪಾಯಿ ನಗದು ಹಾಗೂ ಜಗತ್‍ಪ್ರಸಿದ್ಧ ಬಿದ್ರಿ ಫಲಕ ನೀಡಿ ಗೌರವಿಸಲಾಗುವುದು ಹಾಗೂ ಬೀದರ ಜಿಲ್ಲೆಯ ಒಟ್ಟು 30 ಭಜನಾ ತಂಡಗಳಿಂದ ಬೀದರ ಜಿಲ್ಲಾ ಭಜನಾ ಉತ್ಸವ ಆಯೋಜಿಸಲಾಗಿದೆ ಎಂದು ಕರ್ನಾಟಕ ಬರಹಗಾರರ ಹಾಗೂ ಕಲಾವಿದರ ಸಂಘದ ಅಧ್ಯಕ್ಷ ಡಾ.ಜಗನ್ಮಾಥ ಹೆಬ್ಬಾಳೆ ತಿಳಿಸಿದರು.