Daily Archives: November 14, 2015

TipuSultanJayanti

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ

TipuSultanJayantiಬೀದರ: ನಗರದ ಬಸವೇಶ್ವರ ವೃತ್ತದ ಬಳಿ ಇರುವ ಕೆ.ಜಿ.ಎನ್ ಏಂಟರ್ ಪ್ರೈಜೆಸ್ ಅವರಣದಲ್ಲಿ ಮಂಗಳವಾರ ಮೈಸುರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ 265ನೇ ಜಯಂತಿ ಆಚರಿಸಲಾಯಿತು.
ಮೌಲಾನಾ ಅಬೂಲ್ ಕಲಾಮ್ ಆಝಾದ್ ಯುವಕ ಸಂಘದ ಕಾರ್ಯದರ್ಶಿ ಅಬ್ದುಲ್ ಮುಬೀನ್ ಈ ಸಂದರ್ಭದಲ್ಲಿ ಮಾತನಾಡಿ, ಟಿಪ್ಪು ಅಲ್ಪಸಂಖ್ಯಾತರ ಸ್ವತ್ತಾಗಿರದೆ, ಈ ಭವ್ಯ ದೇಶದ ಒಬ್ಬ ಮಹಾನ ದೇಶಭಕ್ತನಾಗಿ, ಎಲ್ಲ ಧರ್ಮಗಳಮ್ಮು ಗೌರವಿಸುವ ಮಹಾನ ಚೇತನರಾಗಿದ್ದರೆಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪಿ.ಯು.ಪಿ ಯುನಿಯನ್ ಉಪಾಧ್ಯಕ್ಷ ಮಹಮ್ಮದ್ ಗರೀಬ್ ಪಾಶಾ, ಸಮಾಜ ಜೀವಿ ಎಂ.ಎ ಹನ್ನಾನ್, ಪ್ರಮುಖರಾದ ಎಂ.ಡಿ ನದಿಮೊದ್ದೀನ್, ಸುನಿಲಕುಮಾರ, ಸ್ವಯೆಬ್ ಕುಂಜೆ ನಸೀಮ್, ಮುದಸ್ಸೀರ್ ಅಲಿ, ಈರ್ಶಾದ್ ಅಹೆಮ್ಮದ್, ಮಹಮ್ಮದ್ ಇಮ್ರಾನ್, ಮಹಮ್ಮದ್ ರಬ್ಬಾನಿ, ಶೇಖ್ ಈರ್ಶಾದ್, ಆಯಾನ್, ಅಖ್ತರ್ ಅಲಿ ಹಾಗೂ ಇತರರಿದ್ದರು.