Daily Archives: November 9, 2015

Sanjevani Magzine Launching Program

ಬೀದರನಲ್ಲಿ ಸಂಜೆವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ

Sanjevani Deepavali Special Adition Lanching Prgmಬೀದರ: ನಗರದ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಇಂದು ಸಂಜೆವಾಣಿ ಸಮೂಹ ಸಂಸ್ಥೆಯ ಸಂಜೆವಾಣಿ ಸಂಜೆ ದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ ಬಿಡುಗಡೆ ಸಮಾರಂಭ ಜರುಗಿತು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಸಂಜೀವಕುಮಾರ ಹಂಚಾಟೆ ಅವರು ಸಂಚಿಕೆ ಬಿಡುಗಡೆ ಮಾಡಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧಿಪತಿ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಜೀ ಹಾಗೂ ಬೆಂಗಳೂರಿನ ಯಲಹಂಕಾದ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಪೂಜ್ಯ ಅಭಿಯಾನಂದಜೀ ಮಹಾರಾಜ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪ್ರಧಾನ ಸಿವಿಲ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಜಿ.ಶಿವಳ್ಳಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಜಗನ್ನಾಥ ಹೆಬ್ಬಾಳೆ, ಪತ್ರಕರ್ತ ಮಲ್ಲಿಕಾರ್ಜುನ್ ಸ್ವಾಮಿ, ಪತ್ರಿಕೆಯ ವರದಿಗಾರ ಶಿವಕುಮಾರ ಸ್ವಾಮಿ, ಪ್ರಮುಖರಾದ ರಾಜಕುಮಾರ ಹೆಬ್ಬಾಳೆ, ಮಹೇಶ ಗೋರನಾಳಕರ್, ಶಂಕ್ರೆಪ್ಪ ಜನಕಟ್ಟಿ, ಮಂಗಲಾ ಮರಕಲೆ, ಶಿವಶರಣಪ್ಪ ಗಣೇಶಪೂರ, ವಿನಯಕುಮಾರ ಬಿರಾದಾರ, ಸಂಜುಕುಮಾರ ಕಾರಗಾ, ಅಬ್ದುಲ್ ಮುಬೀನ್, ಎಂ.ಡಿ ನಯಿಮುದ್ದೀನ್ ಕಾರಿಗಾರ, ರವಿಕುಮಾರ ಮಂಠಾಳೆ ಸೇರಿದಂತೆ ಇತರರಿದ್ದರು.