Daily Archives: November 6, 2015

Minister visit to ladgeri math

ಲಾಡಗೇರಿ ಹಿರೇಮಠಕ್ಕೆ ಸಚಿವ ಜೈನ್ ಭೇಟಿ

Minister Abhay chandra jain Visit To Ladgeeri Mathಬೀದರ: ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಲಾಡಗೇರಿ ಹಿರೇಮಠ ಸಂಸ್ಥಾನಕ್ಕೆ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಕ್ರೀಡೆ ಹಾಗೂ ಮೀನುಗಾರಿಕೆ ಸಚಿವರಾದ ಅಭಯಚಂದ್ರ ಜೈನ್ ಗುರುವಾರ ಭೇಟಿ ನೀಡಿ, ಜಗದ್ಗುರು ರೇಣುಕಾಚಾರ್ಯರ ದರ್ಶನ ಪಡೆದು, ಶ್ರೀಮಠದ ಅಧಿಪತಿ ಪೂಜ್ಯ ಗಂಗಾಧರ ಶಿವಾಚಾರ್ಯರಿಂದ ಭಕ್ತಿ ಸನ್ಮಾನ ಸ್ವೀಕರಿಸಿದರು.
ನಂತರ ಅವರು ಮಾತನಾಡಿ, ಇಂದು ಮಠ ಮಾನ್ಯಗಳು ಸಂಸ್ಕøತಿ, ಸಂಸ್ಕಾರ, ನೀತಿ, ನಿಯಮಗಳ ತಾಣಗಳಾಗಿದ್ದು, ದುಶ್ಚಟ, ದುರ್ಗುಣ ಹಾಗೂ ದುರಹಂಕಾರಗಳಿಂದ ಮುಕ್ತಿ ಪಡೆಯಲು ಮಠಾಧೀಶರ ಅನುಗ್ರಹ ಅಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ಪಶು ವೈದ್ಯಕಿಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಳಿತ ಮಂಡಳಿ ಸದಸ್ಯ ನಾಗಭೂಷಣ ಕಮಠಾಣಾ, ಪಿಎಸ್‍ಐ ರಮೇಶ ಮೈಲೂರಕರ್, ಪ್ರಮುಖರಾದ ವೀರಶೆಟ್ಟಿ ಮೈಲೂರಕರ್, ಬಂಡೆಪ್ಪ ಗಿರಿ, ನಾಗಶೆಟ್ಟಿ ಪಾಟೀಲ, ಚಂದು ಬಸವರಾಜ ಸೇರಿದಂತೆ ಹಲವು ಭಕ್ತಾದಿಗಳು ಉಪಸ್ಥಿತರಿದ್ದರು.