Daily Archives: October 28, 2015

Balvikas Academy

ಮದ್ರಾಸ್ ಹೈಕೋರ್ಟ್ ಕ್ರಮಕ್ಕೆ ಬಾಲವಿಕಾಸ ಅಕಾಡೆಮಿ ಸಂತಸ

ಬೀದರ: ಮಕ್ಕಳ ಮೇಲೆ ಅತ್ಯಾಚಾರವೆಸಗುವ ದೂರ್ಥರಿಗೆ ಪುರುಷತ್ವ ಹರಣ ಶಿಕ್ಷೆ ನೀಡುವಂತೆ ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಇಂದು ರಾಜಾ ರೋಷವಾಗಿ ದೇಶದೆಲ್ಲಡೆ ಮಕ್ಕಳ ಮೇಲೆ ಅತ್ಯಾಚಾರ, ಅನಾಚಾರ, ದೌರ್ಜನ್ಯಗಳಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಇಂತಹ ಘೋರ ಘಟನೆಗಳ ಬಗ್ಗೆ ಮಾಧ್ಯಮಗಳು ಸಾಕಷ್ಟು ಸುದ್ದಿ ಬಿತ್ತರಿಸಿದರೂ ಸಹ ಯಾವುದೆ ಪ್ರಯೋಜನವಾಗಲಿಲ್ಲ, ಎಷ್ಟೋ ಆರೋಪಿಗಳಿಗೆ ಅನೇಕ ನ್ಯಾಯಾಲಯಗಳು ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ವಿಧಿಸಿದರೂ, ಅಷ್ಟು ಪರಿಣಾಮ ಬೀರುತ್ತಿಲ್ಲವಾದ್ದರಿಂದ ಇಂದು ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪೂ ಸೂಕ್ತವಾಗಿದ್ದು, ಇಂತಹ ಭೀಕರ ಶಿಕ್ಷೆ ನೀಡಿದರೆ ಮುಂದೆ ಇಂತಹ ಘಟನೆಗಳು ಮರುಕಳಿಸಲು ಅಸಾಧ್ಯವಾಗಲಿದ್ದು, ಇಂತಹ ಬೆಳವಣಿಗೆಗೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್ ಹಾಗೂ ಶಾಮರಾವ ನೆಲವಾಡೆ ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Honor Program

ಶಿವಕುಮಾರ ಸ್ವಾಮಿಗೆ ಸನ್ಮಾನ

Honner To Shivkumar Swamyಬೀದರ: ನಗರದ ಹನುಮಾನ ನಗರದಲ್ಲಿರುವ ಕುದುರೆ ಕಲ್ಯಾಣ ಮಂಟಪದಲ್ಲಿ ಸೋಮವಾರ ಕುದುರೆ ಪರಿವಾರದಿಂದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರೂ ಹಾಗೂ ಪತ್ರಕರ್ತ ಶಿವಕುಮಾರ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಿವರಾಜ ಕುದುರೆ, ಕಾರಂಜಾ ಇಲಾಖೆಯ ಹಿರಿಯ ಅಧಿಕಾರಿ ಶಂಭುಲಿಂಗ ಕುದುರೆ, ಜೈಶ್ರೀ ಕುದುರೆ, ಅಶ್ವಿನಿ ಕುದುರೆ, ಭೀಮಣ್ಣ ಕುದುರೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಮಹೇಶ ಗೋರನಾಳಕರ್ ಹಾಗೂ ಇತರರಿದ್ದರು.

Valmiki Jayanti

ಮಂಗಲಾ ಮಹಿಳಾ ಸಂಸ್ಥೆಯಲ್ಲಿ ವಾಲ್ಮಿಕಿ ಜಯಂತಿ

DSC02848ಬೀದರ: ನಗರದ ಶರಣ ನಗರದಲ್ಲಿರುವ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅವರಣದಲ್ಲಿ ಮಂಗಳವಾರ ಮಹರ್ಷಿ ವಾಲ್ಮಿಕಿ ಜಯಂತಿ ನಿಮಿತ್ಯ ಬೀದರ್ ಅರಳು ಸಂಸ್ಥೆಯಿಂದ ಬೀದಿ ನಾಟಕ ಹಾಗೂ ಮಕ್ಕಳಿಂದ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನ ಮಾಡುವ ಉದ್ದೇಶದಿಂದ ಕೋಲಾಟ ಪ್ರದರ್ಶನ ಹಮ್ಮಿಕೊಳ್ಳಲಾಯಿತು.
ಇದಕ್ಕೂ ಮುನ್ನ ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ವಾಲ್ಮಿಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.