Daily Archives: October 18, 2015

Swachata Abhiyan in vaishnavi colony

ಅವ್ಯವಸ್ಥೆಯ ಆಗರವಾದ ವೈಷ್ಣವಿ ಕಾಲೋನಿ
ವಿವಿಧ ಸಂಘಟನೆಗಳಿಂದ ಸ್ವಯಂಪ್ರೇರಿತ ಸ್ವಚ್ಛತಾ ಅಭಿಯಾನ

DSC02705ಬೀದರ: ಜಿಲ್ಲೆಯ ವಿವಿಧ ಸಂಘಟನೆಗಳಿಂದ ನಗರದ ಗುರುನಗರ ಹಾಗೂ ಶಿವನಗರ ಉತ್ತರದ ಮಧ್ಯದಲ್ಲಿರುವ ವೈಷ್ಣವಿ ಬಡಾವಣೆಯಲ್ಲಿ ರವಿವಾರ ಬೃಹತ್ ಸ್ವಚ್ಛತಾ ಅಭಿಯಾನ ಜೊತೆಗೆ ಈ ಕಾಲೋನಿಗೆ ನಿಸ್ಕಾಳಜಿ ತೋರುತ್ತಿರುವ ನಗರ ಸಭೆ ವಿರೂದ್ಧ ಧಿಕ್ಕಾರ ಕೂಗಲಾಯಿತು.

ಕರ್ನಾಟಕ ಬಾಲವಿಕಾಸ ಅಕಾಡೆಮಿ, ಜ್ಞಾನ ಮಾರ್ಗ ಮಲ್ಟಿಪರ್ಪೊಜ್ ಸೊಸೈಟಿ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ, ಬುದ್ದ ಬಸವ ಅಂಬೇಡ್ಕರ್ ಯುವಕ ಸಂಘ ಹಾಗೂ ಕರ್ನಾಟಕ ಜೈ ಸಿಂಹ ಸೇನೆ ವತಿಯಿಂದ ಈ ಅಭಿಯಾನ ಜರುಗಿತು.

 

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವೈಷ್ಣವಿ ಕಾಲೋನಿಯು ಸರ್ವ ಸಮಸ್ಯೆಗಳ ಆಗರವಾಗಿದ್ದು, ಇಲ್ಲಿನ ನಗರ DSC02750ಸಭೆ ಉಪಾಧ್ಯಕ್ಷರೆ ಈ ಕ್ಷೇತ್ರದ ಸದಸ್ಯರಾಗಿದ್ದು, ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಓಣಿಯಲ್ಲಿ ಸ್ವಚ್ಛತೆ ಇಲ್ಲದ ಕಾರಣ ಸೊಳ್ಳೆಗಳ ಕಾಟ ವಿಪರಿತವಾಗಿದೆ. ಇಲ್ಲಿ ಅಡ್ಡಾಡಲು ರಸ್ತೆ ಸಹ ಇರದ ಇಂತಹ ಸನ್ನವೇಶ ಅರಿತ ವಿವಿಧ ಸಂಘಟನೆಗಳು, ಕಸಬರಿಕೆ ಹಿಡಿದು ಸ್ವಯಂಪ್ರೇರಿತರಾಗಿ ಸ್ವಚ್ಛತೆಗೆ ಮುಂದಾಗಿರುವುದು ನಿಜಕ್ಕೂ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಲೆ ತಗ್ಗಿಸುವಂತಾಗಿದೆ ಎಂದ ಅವರು ಇನ್ನು ಮುಂದೆ ಆದರೂ ಈ ಎಲ್ಲ ಸಮಸ್ಯೆಗೆ ಸ್ಪಂದಿಸದಿದ್ದರೆ,  ಹೋರಾಟ ಅನಿವಾರ್ಯವಾಗುತ್ತದೆ ಎಂದರು.

SriLanka Trip by handicapped women in Bidar

ಬಿಳ್ಕೊಡುಗೆ ಸಮಾರಂಭ

File0456ಬೀದರ: ಬೌದ್ದ ಧರ್ಮ ಪ್ರಚಾರಗೋಸ್ಕರ ತಮ್ಮ ತಂದೆ ಜೊತೆ ಶ್ರೀಲಂಕಾಗೆ ತೆರಳುತ್ತಿರುವ ವಿಕಲಚೇತನ ಯುವತಿ ಜಗದೇವಿ ಬೌದ್ದೆಯವರಿಗೆ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸಂಸ್ಥೆ ಅವರಣದಲ್ಲಿ ಸನ್ಮಾನಿಸಿ, ಬಿಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷೆ ಮಂಗಲಾ ಮರಕಲೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ, ಜಿಲ್ಲಾ ಚೆಸ್ ಅಸೋಶಿಯಶನ್ ಅಧ್ಯಕ್ಷ ವಿನಯಕುಮಾರ ಬಿರಾದಾರ, ಶೋಷಿತ ವರ್ಗಗಳ ಒಕ್ಕೂಟದ ಸಂಚಾಲಕ ಮಾರೂತಿ ಸಿಕೆನಪುರೆ, ಪ್ರಮುಖರಾದ ಶರಣು ಖಂಡಾರೆ, ರಿಜ್ವಾನಾ ಹಾಗೂ ಇತರರಿದ್ದರು.

 

Training for Success

ಯಶಶ್ವಿ ಬದುಕಿಗೆ ಸುಸಜ್ಜಿತ ತರಬೇತಿ ಅಗತ್ಯ

ಶಿವಕಾಂತಾ ಬಿರಾದಾರ

Traning innauguration newsಬೀದರ: ಪ್ರತಿಯೊಬ್ಬರ ಜೀವನ ಯಶಸ್ಸು ಕಾಣಲು ಸುಸಜ್ಜಿತ ತರಬೇತಿ ಅಗತ್ಯವಾಗಿದೆ ಎಂದು ಸಪ್ತಗಿರಿ ಪ್ರೌಢಶಾಲೆಯ ಸಹ ಶಿಕ್ಷಕಿ ಶಿವಕಾಂತಾ ಬಿರಾದಾರ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ನಗರದ ಕೆ.ಇ.ಬಿ ಹನುಮಾನ ಮಂದಿರದ ಬಳಿ ಇರುವ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅವರಣದಲ್ಲಿ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಹೊಲಿಗೆ, ಕಂಪ್ಯುಟರ್ ಹಾಗೂ ಸಂಗೀತಗಳನ್ನೊಳಗೊಂಡ ತ್ರೈಮಾಸಿಕ ತರಬೇತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇಂದು ಭಾರತವು ಇಡೀ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿರುವ ಹಿನ್ನಲೆಯಲ್ಲಿ ನಿರುದ್ಯೋಗ ಸಮಸ್ಯೆ ವಿಪರಿತವಾಗಿ, ಅಭಿವೃದ್ಧಿ ದೃಷ್ಟಿಯಿಂದ ಹಿನ್ನಡೆ ಅನುಭವಿಸುತ್ತಿದ್ದೇವೆ. ಈ ಸಮಸ್ಯೆ ನೀಗಿಸಲು ನುರಿತ ತರಬೇತಿದಾರರಿಂದ ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದರು.
12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹಾಕಿ ಕೊಟ್ಟ ಕಾಯಕದ ಪರಿಕಲ್ಪನೆಯನ್ನು ಇಂದು ಯುವ ಜನತೆ ಅನುಸರಿಸಬೇಕಿದೆ. ಸ್ವಾಭಿಯಾನಿಯಾಗಿ ತನ್ನ ಕಾಲ ಮೇಲೆ ತಾನು ಬದುಕುವಂತಾಗಲು ಸ್ವಯಂ ಉದ್ಯೋಗಕ್ಕೆ ಅಣಿಯಾಗುವಂತೆ ಕರೆ ನೀಡಿದರು.