Daily Archives: September 26, 2015

Monthly Farmer Meeting

ಸೆ.28ರಂದು ರೈತ ಸಂಘದ ಮಾಸಿಕ ಸಭೆ

ಬೀದರ: ನಗರದ ಗಾಂಧಿ ಗಂಜ್‍ನಲ್ಲಿನ ರೈತ ಭವನದಲ್ಲಿ ಸೆಪ್ಟೆಂಬರ್ 28ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಅವರ ನೇತೃತ್ವದಲ್ಲಿ ಸಂಘದ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿದೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಭಾಲ್ಕಿ ಅವರ ಅಧ್ಯಕ್ಷತೆಯಲ್ಲಿ  ಜರುಗುವ ಈ ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸರ್ಕಾರ ಬರಗಾಲ ಘೋಷಣೆ ಮಾಡಿದರೂ ಯಾವುದೆ ಪ್ರಯೋಜನ ಆಗದಿರುವುದು, ಇತ್ತಿಚೀಗಷ್ಟೆ ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸತತ 19 ದಿನಗಳ ಹಗಲು ರಾತ್ರಿ ಧರಣಿ ನಡೆಸಿದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪಂದಿಸದ ಬಗೆ, 2014-15ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಎಫ್.ಆರ್.ಪಿ ಪ್ರಕಾರ ಹಣ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ನಾಲ್ಕು ಕಾರ್ಖಾನೆಗಳಿಗೆ ಬೀಗ ಜಡಿದಿದ್ದರೂ ಇಲ್ಲಿಯ ವರೆಗೆ ಯಾವುದೆ ಕ್ರಮ ಜರುಗಿಸದ ಪರಿ ಸೇರಿದಂತೆ ಇನ್ನು ಅನೇಕ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿವೆ.

Pandit Deendayal Birth Anniversary

ಯುವಜನರಲ್ಲಿ ದೇಶಭಕ್ತಿ ಬಲಾಢ್ಯಗೊಳ್ಳಲು

ಉಪಾಧ್ಯಾಯರ ಕೊಡುಗೆ ಅಪಾರ

Deen Dayan Upadhyay 99 th Birth Anniversary 3ಬೀದರ: ಇಂದು ಯುವಜನರಲ್ಲಿ ದೇಶ ಭಕ್ತಿ, ದೇಶಾಭಿಮಾನ ಕಡಿಮೆಯಾಗಿ, ಪಾಶ್ಚಾತ್ಯರ ಅನುಕರಣೆಗೆ ಮಾರು ಹೋಗಿ, ಅರ್ಥಹೀನ ಬದುಕು ಸಾಗಿಸುತ್ತಿರುವ ಹಿನ್ನಲೆಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ಕೊಡುಗೆ ಸ್ಮರಿಸಿ, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುವಂತೆ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಕಾಶಿನಾಥ ಬೆಲ್ದಾಳೆ ಕರೆ ನೀಡಿದರು.
ಹುಮನಾಬಾದ್ ತಾಲೂಕಿನ ಮನ್ನಾಯಿಖೆಳ್ಳಿ ಕ್ರಾಸ್ ಬಳಿ ಇರುವ ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಯದ ಅವರಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೀದರ್, ಭಾರತ Deen Dayan Upadhyay 99 th Birth Anniversary 4ಯುತ್ ವೆಲಫೇರ್ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೊಸೈಟಿ ಮತ್ತು ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಂiÀiಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ ದೀನದಯಾಳ ಉಪಾಧ್ಯಾಯರ 99ನೇ ಜನ್ಮದಿನಾಚರಣೆ ನಿಮಿತ್ಯ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಸಿ ವಿತರಿಸುವ ಮುಲಕ ಉದ್ಘಾಟಿಸಿ ಮಾತನಾಡಿದರು.

ಇಂದು ದೇಶದಲ್ಲಿ ಸ್ವಚ್ಛ ಭಾರತ ಮೀಷನ್ ಅಡಿ ನಡೆಯುತ್ತಿರುವ ಕಾರ್ಯಕ್ರಮಗಳು ಉಪಾಧ್ಯಾಯರ ಗುರಿ ಹಾಗೂ ಉದ್ದೇಶಗಳಾಗಿದ್ದು, ಅವರ ತ್ಯಾಗ ಹಾಗೂ ಬಲಿದಾನ ಇಡೀ ಮನುಕುಲವೇ ಹುಬ್ಬೇರಿಸುವಂತಿತ್ತು ಎಂದ ಅವರು, ಅವರ ಆಲೋಚನೆಗಳು ಹಾಗೂ ಸಂದೇಶಗಳು ಪಠ್ಯದ ರೂಪದಲ್ಲಿ ಯುವ ವಿದ್ಯಾರ್ಥಿಗಳ ಕೈಸೇರಿಸುವ ಕೆಲಸ ಉಭಯ ಸರ್ಕಾರಗಳು ಮಾಡುವಂತೆ ಕರೆ ಕೊಟ್ಟರು.