Daily Archives: September 19, 2015

Jaanpad artist

ಪರಿಶುದ್ಧ ಕಾಯಕದಿಂದ ಪರಿಪೂರ್ಣ ದೇಶಾಭಿವೃದ್ಧಿ:

ವಾಲ್ದೊಡ್ಡಿ ಅಭಿಮತ

19.bidar-6ಬೀದರ: ಜೀವನದಲ್ಲಿ ಪ್ರತಿಯೊಬ್ಬರು ಕಾಯಕ ಜೀವಿಯಾಗಿ, ಪರಿಶುದ್ಧ, ಪ್ರಾಮಾಣಿಕ ಹಾಗೂ ಆರದರ್ಶಕತೆಯಿಂದ ಕೆಲಸ ಮಾಡಿದಲ್ಲಿ ವಯಕ್ತಿಕ ವಿಕಾಸದ ಜೊತೆಗೆ ಆ ದೇಶದ ಪರುಪೂರ್ಣ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಖ್ಯಾತ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅಭಿಮತ ವ್ಯಕ್ತಪಡಿಸಿದರು.
ನಗರದ ಹನುಮಾನ ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಆಶ್ವಿನಿ ಕುದುರೆ ಕಾಲೇಜಿನ ಅಡಿಟೋರಿಯಮ್ ಹಾಲ್‍ನಲ್ಲಿ ಇತ್ತಿಚೀಗೆ ಅಮೆರಿಕಾದಲ್ಲಿ ಜರುಗಿದ ವಿಶ್ವದ ಮೂರನೇ ನಾವಿಕ ಸಮ್ಮೇಳನದಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿ, ತಮ್ಮ ಕಲಾ ವೈಡುರ್ಯ ಚಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದ ಹಿನ್ನಲೆಯಲ್ಲಿ ಲಾಲಪ್ಪ ಕುದುರೆ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ನಿಂದ ಸನ್ಮಾನಿತರಾಗಿ ಮಾತನಾಡಿದರು.

ಅಮೆರಿಕಾದಲ್ಲಿ ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಯಾರೊಬ್ಬರು ಮನೆಯಲ್ಲಿ ಕುಳಿತು ಕಾಲ ಕಳೆಯದೆ, ನಿರಂತರ ಕಾಯಕ ಯೋಗಿಯಾಗಿ ಬದುಕು ಸಾಗಿಸುತ್ತಿರುವುದರಿಂದಲೇ ಇಂದು ಅದು ಸೂಪರ ಶಕ್ತಿ ಶಾಲಿ ದೇಶವಾಗಿ ನಿಂತಿದೆ. ಜಪಾನ ಸಹ ಎರಡು ಬಾರಿ ವಿಶ್ವ ಮಹಾಯುದ್ದದಲ್ಲಿ ನಶಿಸಿ ಹೋದರೂ ಪೂನಃ ಎಂದಿನಂತೆ ಬೆಳೆದು ನಿಂತಿರುವುದು ಗಮನಿಸಿದರೆ, ಕಾಯಕದಲ್ಲಿ ಅಂತಹ ಶಕ್ತಿ ಅಡಗಿದೆ. ಆದರೆ ನಮ್ಮ ದೇಶದಲ್ಲಿ ಸೋಮಾರಿಗಳ, ಹುಂಬರ, ಅರ್ಧ ಬರ್ಧ ಬುದ್ದಿ ಜೀವಿಗಳ ಹಾವಳಿ ಹೆಚ್ಚಾಗಿ ನಮ್ಮ ದೇಶ ಹಿಂದೆ ಬೀಳಲು ಕಾರಣವಾಗಿದ್ದು, ನಾವು ಸಹ ಅಮೆರಿಕನ್ನರಂತೆ ಸೂಪರ್ ಪಾವರ್ ಆಗಲು ಡಾ.ಅಬ್ದುಲ್ ಕಲಾಮ್‍ರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ವಿಜಯಲಕ್ಷ್ಮೀ ಬಹೆನ್‍ಜಿ, ಬಿ.ಕೆ ಮಂಗಲಾ ಬಹೆನ್‍ಜಿ ಸಾನಿಧ್ಯ ವಹಿಸಿದ್ದರು. ಭಾರತಿಯ ಜನಪಾ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವರಾಜ ಕುದುರೆ ಪ್ರಾಸ್ತಾವಿಕ ಮಾತನಾಡಿ, ಶಂಭುಲಿಂಗ ವಾಲ್ದೊಡ್ಡಿಯವರು ಜಿಲ್ಲೆಯ ಕಲಾವಿದರಿಗೆ ಪ್ರೇರಣಾದಾಯಕರು ಹಾಗೂ ಮಾದರಿ ಪ್ರಾಯರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಯುವ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬರುವಂತೆ ಕರೆ ನೀಡಿದರು.

ಲಾಲಪ್ಪ ಕುದುರೆ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಂಭುಲಿಂಗ ಕುದುರೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಶೇಖರಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಜೈಶ್ರೀ ಕುದುರೆ ಹಾಗೂ ಖಜಾಂಚಿ ಆಶ್ವಿನಿ ಕುದುರೆ ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನ ಜಿಲ್ಲೆಯ ವಿವಿಧ ಸಂಘಟನೆಗಳಿಂದ ವಾಲ್ದೊಡ್ಡಿಯವರನ್ನು ಆತ್ಮಿಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ ದೇವರ್ಷಿ, ರಾಜಕುಮಾರ ವರ್ಮಾ, ಸುರೇಶ ಕುದುರೆ, ಶಿವಮೂರ್ತಿ ಕುದುರೆ, ಲಕ್ಷ್ಮೀ ಒಂಟೆ ಸೇರಿದಂತೆ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರು, ಕಾಲೇಜಿನ ಸಿಬ್ಬಂದಿಗಳು ಇದ್ದರು.
ಆರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ರಮೇಶ ಶಿಂಧೆ ಸ್ವಾಗತಿಸಿದರೆ, ರಾಜ್ಯ ಯುವ ಪ್ರಶಸ್ತಿ ಪುರಷ್ಕøತ ಮಹೇಶ ಗೋರನಾಳಕರ್ ನಿರುಪಿಸಿ, ವಂದನೆ ಸಲ್ಲಿಸಿದರು.

Children Art competition

ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಮನ್ನಳ್ಳಿ ಮಕ್ಕಳ ಮೇಲುಗೈ

ArtCompetitionಬೀದರ: ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಚಿತ್ರಕಲಾ ಸಂಘದ ಸಹಯೋಗದಲ್ಲಿ ಇತ್ತಿಚೀಗೆ ಹಮ್ಮಿಕೊಳ್ಳಲಾಗಿದ್ದ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕಿನ ಮನ್ನಳ್ಳಿ ಗ್ರಾಮದ ಬಸವ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಅಜಮತ್ ಈತನು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಿಟ್ಟಿಸಿದರೆ, ಜ್ಯೋತಿ ಲಕ್ಷ್ಮಣ ಇವಳು ತೃತಿಯ ಸ್ಥಾನ ಪಡೆದು ಕಂಚಿನ ಪದಕ ಪಡೆದಳು.

ಮಕ್ಕಳ ಈ ಅವಿರತ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಸವರಾಜ ಪನಾಳೆ, ಮುಖ್ಯ ಗುರು ಶಶಿಧರ ನಿಜಾಂಪೂರೆ, ಚಿತ್ರಕಲಾ ಶಿಕ್ಷಕ ಶ್ರೀಕಾಂತ ತುಗ್ಗಾ, ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Millenium School

ಶಸ್ತ್ರಾಸ್ತ್ರದಲ್ಲಿ ಸ್ವಾವಲಂಬನೆ ಸಾಧಿಸಲು

ಐಐಟಿ ಜೊತೆಗೆ ನೈತಿಕ ಶಿಕ್ಷಣ ಅಗತ್ಯ: ನ್ಯಾ.ಹಂಚಾಟೆ

kanunu arivu neravu prgm in mileniam public schoolಬೀದರ: ವಿಶ್ವದಲ್ಲಿ ಭಾರತವು ಭಾರಿ ಶಸ್ತ್ರಾಸ್ತ್ರ ತಯಾರಿಸಿ. ಸ್ವಾವಲಿಂಬನೆ ಸಾಧಿಸಲು ನಮ್ಮ ದೇಶದ ಐಐಟಿ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ತಾಂತ್ರಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಕಲಿತಲ್ಲಿ ದೇಶಪ್ರೇಮ, ದೇಶಭಕ್ತಿ ಜಾಗೃತವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಹೇಳಿದರು.

ಶುಕ್ರವಾರ ನಗರದ ಶಿವನಗರ ಉತ್ತರದಲ್ಲಿರುವ ದಿ.ಮಿಲೇನಿಯಮ್ ಪಬ್ಲಿಕ್ ಸ್ಕೂಲ್‍ನ ಅವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕೇತಕಿ ಪಾರ್ವತಿ ಸಂಗಮೇಶ್ವರ ಟ್ರಸ್ಟ್‍ಗಳ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೇರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.