Monthly Archives: September 2015

Youth Empowerment event

ಯುವ ನಾಯಕತ್ವ ಹಾಗೂ ಸಮುದಾಯ ಅಭಿವೃದ್ದಿ

ತರಬೇತಿ ಸಮಾರೋಪ ನಾಳೆ

DSC02451ಬೀದರ: ನಾಳೆ(27-09-2015) ಮಧ್ಯಾಹ್ನ 1.00 ಗಂಟೆಗೆ ಭಾಲ್ಕಿ ತಾಲೂಕಿನ ನಿಟ್ಟೂರು(ಬಿ) ಗ್ರಾಮದ ಮಹಾತ್ಮ ಜ್ಯೋತಿಬಾ ಫುಲೆ ಮಹಾವಿದ್ಯಾಲಯದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರ ಬೀದರ್, ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ ಕಾಳಸರ ತುಗಾಂವ, ರಮಾಬಾಯಿ ಮಹಿಳಾ ಮಂಡಳಿ ಹಾಗೂ ಮಹಾತ್ಮ ಜ್ಯೋತಿಬಾ ಫುಲೆ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ನಿಟ್ಟುರ್(ಬಿ) ಇವರ ಸಂಯುಕ್ತಾಶ್ರಯದಲ್ಲಿ ಯುವ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಜರುಗಲಿದೆ.

ಸೆ.26ರಿಂದ ಆರಂಭವಾದ ಈ ತರಬೇತಿಯು ನಾಳೆ ಮುಕ್ತಾಯಗೊಳ್ಳಲಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಕೆ ಗಾದಗೆ ವಹಿಸಲಿದ್ದು, DSC02454ಮುಖ್ಯ ಅತಿಥಿಗಳಾಗಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಆರ್.ಎಂ.ಮಂಜುನಾಥ, ಗೌರವ ಅತಿಥಿಗಳಾಗಿ ಭಾರತಿಯ ಪ್ರಾಣಿ ಕಲದ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಹಾಗೂ ಅತಿಥೀಗಳಾಗಿ ಮಹಾತ್ಮ ಜ್ಯೋಂತಿಬಾ ಫುಲೆ ಮಹಾವಿದ್ಯಾಲಯದ ಪ್ರಾಚಾರ್ಯ ಬಾಬುರಾವ ಮಾಳಗೆ ಭಾಗವಹಿಸುವರೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಪಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nyk Program

ವಿದ್ಯೆ ಜ್ಞಾನಕ್ಕೆ ದೀವಿಗೆಯಾದರೆ,

ಕ್ರೀಡೆ ಆರೊಗ್ಯಕ್ಕೆ ಔಷಧಿ: ಮಂಜುನಾಥ

 

29.bidar-1ಬೀದರ: ವಿದ್ಯೆ ಜ್ಞಾನ ಸಂಪಾದನೆಗೆ ಆಸರೆಯಾದರೆ, ಕ್ರೀಡೆಗಳು ದೈಹಿಕ ಸಾಮಥ್ರ್ಯಾಭವೃದ್ಧಿಗೆ ಸಹಕಾರಿಗಾಗಿವೆ ಎಂದು ಪ್ರಗತಿ ಕೃಷ್ಣಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಆರ್.ಎಂ. ಮಂಜುನಾಥ ಅಭಿಪ್ರಾಯಪಟ್ಟರು.
ಸೋಮವಾರ ನೆಹರೂ ಯುವಕೇಂದ್ರ ಬೀದರ, ಕಾಳಸರತುಗಾಂವದ ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರ, ರಮಾಬಾಯಿ ಮಹಿಳಾ ಮಂಡಳಿ, ಮಹಾತ್ಮಾ ಜ್ಯೋತಿಭಾ ಫುಲೆ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ನಿಟ್ಟೂರು(ಬಿ)ಗಳ ಸಂಯುಕ್ತಾಶ್ರಯದಲ್ಲಿ ಭಾಲ್ಕಿ ತಾಲೂಕು ಮಟ್ಟದ ಯುವ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದ್ದೆ ಇರುತ್ತದೆ. ಆದರೇ ಅದನ್ನು ಹೋರಹಾಕಲು ಸ್ಪರ್ಧೆಯಲ್ಲಿ ನಿರಂತರವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯಾ ಸ್ವಾಮಿ “ಸಮುದಾಯ ಅಭಿವೃದ್ಧಿಯದಲ್ಲಿ ಯುವ ಜನರ ಪಾತ್ರ” ಎಂಬ ವಿಷಯದ ಕುರಿತು ಮಾತನಾಡಿ, ಇಂದು ಯುವ ಜನಾಂಗ ಸ್ವಾರ್ಥ ಹಾಗೂ ಅಹಂಕಾರಿ ಜೀವನ ನಡೆಸುತ್ತಿದ್ದು, ಇದರಿಂದ ಸಮುದಾಯದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು, ವಿಲಾಸಿ ಹಾಗೂ ಸೋಮಾರಿತನದಿಂದ ದೂರವಾಗಿ, ಸ್ವಚ್ಛ ಹಾಗೂ ದುಷ್ಚಟ, ದುರಾಚಾರ ರಹಿತ ವದುಕು ನಮ್ಮದಾಗಬೇಕೆಂದು ಕರೆಯಿತ್ತರು.
ಪದವಿ ಪೂರ್ವ ಹಾಗೂ ವೃತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಕೆ.ಗಾದಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಜನರಲ್ಲಿ ನಾಯಕತ್ವ ಗುಣ ಜಾಗೃತವಾಗಬೇಕು, ಇಂತಹ ಶಿಬಿರಗಳಿಂದ ಅದು ಸಾಧ್ಯ ಎಂದರು.
ಮಹಾತ್ಮಾ ಜ್ಯೋತಿಭಾ ಫುಲೆ ಮಹಾವಿದ್ಯಾಲಯದ ಪ್ರಾಚಾರ್ಯ ಬಾಬುರಾವ ಮಾಳಗೆ ವೇದಿಕೆಯಲ್ಲಿದರು.

ಶಿಬಿರಾರ್ಥಿಗಳಾದ ಪ್ರೀತಿ ಪ್ರಾಥಿಸಿದರು, ಪುಜಾ ಸ್ವಾಗತಿಸಿದ್ದರು, ಸ್ವಾಮಿ ವಿವೇಕಾನಂದ ಯುವ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಕುಮಾರ ಸ್ವಾಮಿ ಶಿಬಿರದ ವರದಿ ಮಂಡಿಸಿದರು. ಕು. ಕಾವೇರಿ ಹಾಗೂ ಸುಶೀಲಕುಮಾರ ಶಿಬಿರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು, ಪ್ರವೀಣ ನಿರೂಪಿಸಿದರು, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಮಹೇಶ ಗೊರನಾಳಕರ ವಂದಿಸಿದರು. ಕಾಲೇಜಿನ ಉಪನ್ಯಾಸಕರಾದ ಬಿ.ನಾಗನಾಥ, ಚಂದ್ರಕಾಂತ ಮೇತ್ರೆ, ಹಲಬರ್ಗೆ ಶಾಂತಕುಮಾರ, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತ ರವಿಕುಮಾರ ಮಂಠಾಳೆ ಸೇರಿದಂತೆ ಸ್ಥಳಿಯ ಕಾಲೇಜಿನ ಸಿಬ್ಬಂದಿ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದರು.

Monthly Farmer Meeting

ಸೆ.28ರಂದು ರೈತ ಸಂಘದ ಮಾಸಿಕ ಸಭೆ

ಬೀದರ: ನಗರದ ಗಾಂಧಿ ಗಂಜ್‍ನಲ್ಲಿನ ರೈತ ಭವನದಲ್ಲಿ ಸೆಪ್ಟೆಂಬರ್ 28ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಅವರ ನೇತೃತ್ವದಲ್ಲಿ ಸಂಘದ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿದೆ.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಭಾಲ್ಕಿ ಅವರ ಅಧ್ಯಕ್ಷತೆಯಲ್ಲಿ  ಜರುಗುವ ಈ ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸರ್ಕಾರ ಬರಗಾಲ ಘೋಷಣೆ ಮಾಡಿದರೂ ಯಾವುದೆ ಪ್ರಯೋಜನ ಆಗದಿರುವುದು, ಇತ್ತಿಚೀಗಷ್ಟೆ ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಸತತ 19 ದಿನಗಳ ಹಗಲು ರಾತ್ರಿ ಧರಣಿ ನಡೆಸಿದರೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪಂದಿಸದ ಬಗೆ, 2014-15ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಎಫ್.ಆರ್.ಪಿ ಪ್ರಕಾರ ಹಣ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ನಾಲ್ಕು ಕಾರ್ಖಾನೆಗಳಿಗೆ ಬೀಗ ಜಡಿದಿದ್ದರೂ ಇಲ್ಲಿಯ ವರೆಗೆ ಯಾವುದೆ ಕ್ರಮ ಜರುಗಿಸದ ಪರಿ ಸೇರಿದಂತೆ ಇನ್ನು ಅನೇಕ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಲಿವೆ.

Pandit Deendayal Birth Anniversary

ಯುವಜನರಲ್ಲಿ ದೇಶಭಕ್ತಿ ಬಲಾಢ್ಯಗೊಳ್ಳಲು

ಉಪಾಧ್ಯಾಯರ ಕೊಡುಗೆ ಅಪಾರ

Deen Dayan Upadhyay 99 th Birth Anniversary 3ಬೀದರ: ಇಂದು ಯುವಜನರಲ್ಲಿ ದೇಶ ಭಕ್ತಿ, ದೇಶಾಭಿಮಾನ ಕಡಿಮೆಯಾಗಿ, ಪಾಶ್ಚಾತ್ಯರ ಅನುಕರಣೆಗೆ ಮಾರು ಹೋಗಿ, ಅರ್ಥಹೀನ ಬದುಕು ಸಾಗಿಸುತ್ತಿರುವ ಹಿನ್ನಲೆಯಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯರ ಕೊಡುಗೆ ಸ್ಮರಿಸಿ, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುವಂತೆ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಕಾಶಿನಾಥ ಬೆಲ್ದಾಳೆ ಕರೆ ನೀಡಿದರು.
ಹುಮನಾಬಾದ್ ತಾಲೂಕಿನ ಮನ್ನಾಯಿಖೆಳ್ಳಿ ಕ್ರಾಸ್ ಬಳಿ ಇರುವ ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಯದ ಅವರಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ ಬೀದರ್, ಭಾರತ Deen Dayan Upadhyay 99 th Birth Anniversary 4ಯುತ್ ವೆಲಫೇರ್ ಏಜ್ಯುಕೇಶನ್ ಐಂಡ್ ರೂರಲ್ ಡೆವಲಪಮೆಂಟ್ ಸೊಸೈಟಿ ಮತ್ತು ಚಾಲುಕ್ಯ ಪದವಿ ಪೂರ್ವ ಮಹಾವಿದ್ಯಾಲಂiÀiಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಡಿತ ದೀನದಯಾಳ ಉಪಾಧ್ಯಾಯರ 99ನೇ ಜನ್ಮದಿನಾಚರಣೆ ನಿಮಿತ್ಯ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಿಗೆ ಸಸಿ ವಿತರಿಸುವ ಮುಲಕ ಉದ್ಘಾಟಿಸಿ ಮಾತನಾಡಿದರು.

ಇಂದು ದೇಶದಲ್ಲಿ ಸ್ವಚ್ಛ ಭಾರತ ಮೀಷನ್ ಅಡಿ ನಡೆಯುತ್ತಿರುವ ಕಾರ್ಯಕ್ರಮಗಳು ಉಪಾಧ್ಯಾಯರ ಗುರಿ ಹಾಗೂ ಉದ್ದೇಶಗಳಾಗಿದ್ದು, ಅವರ ತ್ಯಾಗ ಹಾಗೂ ಬಲಿದಾನ ಇಡೀ ಮನುಕುಲವೇ ಹುಬ್ಬೇರಿಸುವಂತಿತ್ತು ಎಂದ ಅವರು, ಅವರ ಆಲೋಚನೆಗಳು ಹಾಗೂ ಸಂದೇಶಗಳು ಪಠ್ಯದ ರೂಪದಲ್ಲಿ ಯುವ ವಿದ್ಯಾರ್ಥಿಗಳ ಕೈಸೇರಿಸುವ ಕೆಲಸ ಉಭಯ ಸರ್ಕಾರಗಳು ಮಾಡುವಂತೆ ಕರೆ ಕೊಟ್ಟರು.

Byalhali panchayat news

ನಿರ್ಲಕ್ಷ್ಯ ತೋರುತ್ತಿರುವ ಬ್ಯಾಲಹಳ್ಳಿ(ಕೆ)

ಗ್ರಾಮ ಪಂಚಾಯತಿಯ ಪಿಡಿಓ

ಬೀದರ ಸೆ.23:-ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ(ಕೆ) ಗ್ರಾಮ ಪಂಚಾಯತಿಯ ಪಿಡಿಓ ಅವರು ಪಂಚಾಯತಿ ವ್ಯಾಪ್ತಿಯಲ್ಲಿರುವ ಹಾಲಹಳ್ಳಿ(ಕೆ), ಬ್ಯಾಲಹಳ್ಳಿ(ಕೆ) ನಿಲಮ್ಮನಳ್ಳಿ ಮತ್ತು ತಾಂಡಾದ ನಿವಾಸಿಗಳಿಗೆ ಸರ್ಕಾರದ ಸೌಲಭ್ಯ ನಿಡುವಲ್ಲಿ ಮತ್ತು  ಜನೆತೆಗೆ ರಹವಾಸಿ ಪ್ರಮಾಣ ಪತ್ರ  ನಿಡಲು  ಕಿರುಕುಳ ನೀಡುತ್ತಿದ್ದಾರೆ.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ಸರ್ಕಾರದ ಯೋಜನೆಗಳಾದ ಬಸವ ವಸತಿ ಯೋಜನೆ, ಇಂದಿರಾ ಆವಾಸ ಯೋಜನೆಯಡಿಯಲ್ಲಿ ನಿರ್ಮಾಣ ಆಗುತ್ತಿರುವ ಮನೆಗಳ 1ನೇ ಹಂತದ 2ನೇ ಹಂತದ ,3ನೇ ಹಂತದ 4ನೇ ಹಂತದ ಬಿಲ್ಲ್ ಮಾಡಲು ಪಿಡಿಓ ಅವರು  ನಿರ್ಲಕ್ಷ ತೋರುತ್ತಿದ್ದಾರೆ.ಅಭಿವೃದ್ಧಿಗಾಗಿ 1ಸಾವಿರ ರೂ.ಕರ ಪ್ರತ್ಯೇಕವಾಗಿ ತೆಗೆದುಕೊಳ್ಳುತ್ತಿದ್ದಾರೆ, ಈ ಕರ ಪಡೆಯುವ ಪಂಚಾಯತಿಯ ಕ್ಲಾರ್ಕ ಹಲವರಿಗೆ ದುಡ್ಡು ಪಡೆದು ರಸೀದಿ ನೀಡುತ್ತಿಲ್ಲ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಕಚೇರಿಗೆ ಹೋದವರಿಗೆ ಅವಶ್ಯಕತೆ ಇಲ್ಲದಿದ್ದರೂ ಸಾರ್ವಜನಿಕ ಸ್ಥಳದಲ್ಲಿರುವ ಸರ್ಕಾರಿ ಕುಡಿಯುವ ನೀರಿನ ನಲ್ಲಿಗಳ ಕರಗಳನ್ನು ಪಾವತಿಸಲು ಪಿಡಿಓ ಸೂಚಿಸುತ್ತಿದ್ದಾರೆ. ಮನೆ ಕರ, ನಲ್ಲಿಕರ, ಪಡೆಯುತ್ತಿದ್ದಾರೆ.ಮತ್ತು ಈ ಮಾಹಿತಿಯನ್ನು  ನಾಡ ಕಚೇರಿಗೆ ನೀಡದೆ  ಕಡತೆಗಳನ್ನು ಪಂಚಾಯತಿಯಲ್ಲಿಯೇ ಇಟ್ಟಿರುತ್ತಾರೆ.ಸರ್ಕಾರದ ಆದೇಶದಂತೆ ಸರ್ಕಾರಿ ಭೂಮಿಯಲ್ಲಿ  ಮನೆ ನಿರ್ಮಿಸಿಕೊಂಡಿರುವ  ಮತ್ತು ನಿರ್ಮಿಸಿಕೊಳ್ಳುತ್ತಿರುವ ನಿವಾಸಿಗಳಿಗೆ ಅಕ್ರಮ ಸಕ್ರಮ ನಿಯಮದಡಿ ನೊಂದಾಯಿಸಲು ನಾಡ ಕಚೇರಿಗೆ ಮಾಹಿತಿ ಸಲ್ಲಿಸುತ್ತಿಲ್ಲ . ಅಕ್ರಮ ಸಕ್ರಮಯಡಿಯಲ್ಲಿ ಕಮಲಪುರದಲ್ಲಿ 100 ಮನೆ ನಿಲಮನಳ್ಳಿ ಗ್ರಾಮದಲಿ 10 ಮನೆಗಳು, ನಿಲಮನಳ್ಳಿ ತಾಂಡಾದಲ್ಲಿ 6 ಮನೆಗಳು, ಹಾಲಹಳ್ಳಿ (ಕೆ)ಗ್ರಾಮದಲ್ಲಿ 30ರಿಂದ 40 ಮನೆಗಳು, ಹಾಲಹಳ್ಳಿ ತಾಂಡವು  ಸರ್ಕಾರಿ ಭೂಮಿಯಲ್ಲಿ ಇರುತ್ತವೆ.

ಸಕ್ರಮಕ್ಕಾಗಿ  ಹಕ್ಕು ಪತ್ರಲದಲ್ಲಿ ಹೆಸರು ಸೇರಿಸಿಕೊಳ್ಳಲು ತಹೀಲ್ದಾರರು 2006ರಲ್ಲಿಯೇ ಸೂಚನೆ ನೀಡಿದರು.ಒಟ್ಟಾರೆ ಈ ಪಂಚಾಯತಿಯ ಪಿ.ಡಿ.ಓ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸಿದೆ ಅವುಗಳನ್ನು ಬಗೆ ಹರಿಸದೆ ಕೆಲಸ ಮಾಡಲು ನಿರಾಕಾರಣೆ ಮಾಡುತ್ತಿದ್ದು  ದಿವ್ಯ ನಿರ್ಲಲಕ್ಷತನ ತೋರುತ್ತಾ ಪಂಚಾಯತಿ ಪ್ರಗತಿಗೆ ಕುಂಠಿತ ಮಾಡುತ್ತಿದ್ದಾರೆ.ಆದ್ದರಿಂದ ಇವರನ್ನು ತಕ್ಷಣವೇ ಬೇರೆ ಕಡೆಗೆ ವರ್ಗಾವಣೆ ಮಾಡಿ ಬೇರೊಬ್ಬ ಒಳ್ಳೆಯ ಪಂಚಾಯತ ಅಭಿವೃದ್ಧಿ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ

Animal Ambulance Facility

ಗೋವುಗಳ ಆರೊಗ್ಯ ಸಂರಕ್ಷಣೆಗೆ

ಮಂಡಳಿಯಿಂದ ಆ್ಯಬುಲೇನ್ಸ್ ಸೇವೆ

22.bidar-1ಬೀದರ: ಹಲವು ವರ್ಷಗಳಿಂದ ಸರ್ಕಾರದ ಯಾವುದೇ ಅನುದಾನ ಪಡೆಯದೇ ನಿಸ್ವಾರ್ಥಿಯಾಗಿ ಹಾಗೂ ಸಾರ್ವಜನಿಕವಾಗಿ ಗೋಶಾಲೆ ನಡೆಸುವ ಕೇಂದ್ರಕ್ಕೆ ನಮ್ಮ ಮಂಡಳಿಯಿಂದ ಸುಮಾರು 5 ಲಕ್ಷ ರು.ವೆಚ್ಚದಲ್ಲಿ ಆ್ಯಂಬುಲೇನ್ಸ್ ಸೇವೆ, ಜೊತೆಗೆ ಗೋವುಗಳ ಆಶ್ರಯಕ್ಕಾಗಿ ಸೆಲ್ಟರ್ ಹೌಸ್ ನಿರ್ಮಾಣಕ್ಕಾಗಿ ರು.3 ಲಕ್ಷ ಅನುದಾನ  ಒದಗಿಸಲಾಗುತ್ತಿದೆ ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಸ್ಪಷ್ಟಪಡಿಸಿದರು.

ನೆರೆಯ ತೆಲಂಗಾಣ ರಾಜ್ಯದ ಮೇದಕ್ ಜಿಲ್ಲೆಯ ನಾರಾಯಣಪೂರ ತಾಲೂಕಿನ ರತ್ನಾಪೂರ ಗ್ರಾಮದಲ್ಲಿರುವ ಶ್ರೀಕೃಷ್ಣ ಆರ್ಜುನ್‍ಗಿರಿ ಮಹಾರಾಜರ ಆಶ್ರಮದಲ್ಲಿ ಸೋಮವಾರ ಇಲ್ಲಿಯ ಗೋಶಾಲೆಗೆ ಮಂಜುರಿಯಾದ ರು.10.000 ಹಣದ ಆದೇಶ ಪತ್ರ ಹಾಗೂ ಮಾನ್ಯತೆ ಪ್ರಮಾಣ ಪತ್ರವನ್ನು ಪೂಜ್ಯ ಸಂತ ಆರ್ಜುನ್‍ಗಿರಿ ಮಹಾರಾಜರಿಗೆ ಹಸ್ತಾಂತರಿಸಿ, ಮಾತನಾಡುತ್ತಿದ್ದರು.

Basveshwar anusthan event

ಪರೋಪಕಾರದಿಂದ ಮಾತ್ರ ಪಾರಮಾರ್ಥ

ಸಿದ್ಧಿ: ಬಸವಲಿಂಗ ದೇವರು

 

21.bidar-6ಬೀದರ: ಜೀವನದಲ್ಲಿ ಸದಾ ಪರೋಪಕಾರಿಯಾಗಿರಬೇಕು. ನಮ್ಮ ಬಗ್ಗೆ  ಕೇಡು ಬಯಸಿವವರನ್ನು ಒಳ್ಳೆಯವರನ್ನಾಗಿ ಗುರುತಿಸಬೇಕು. ಹಾಗಾದಾಗ ಅದು ದೇವರಿಗೆ ಅರ್ಪಿತವಾಗಿ ಪಾರಮಾರ್ಥ ಸಿದ್ಧಿ ಸಾಧ್ಯ ಎಂದು ಕಟಕ ಚಿಂಚೋಳಿಯ ಹುಗ್ಗೆಳ್ಳಿ ಮಠದ ಪೂಜ್ಯ ಬಸವಲಿಂಗ ದೇವರು ನುಡಿದರು.

ಹುಮನಾಬಾದ್ ತಾಲೂಕಿನ ನೀರ್ಣಾ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 14ರ ವರೆಗೆ ಒಂದು ತಿಂಗಳ ಪರ್ಯಂತರ ಅನುಷ್ಟಾನ ಹಮ್ಮಿಕೊಂಡು ಸೋಮವಾರ ಅನುಷ್ಟಾನ ಮಂಗಲ ಹಾಗೂ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಘನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಸಿಗಬೇಕಾದರೆ, ಗುರು ಹಿರಿಯರ ಸೇವೆ, ಗೌರವ ಹಾಗೂ ಭಕ್ತಿಯಿಂದ ಸಾಧ್ಯ ಎಂದ ಅವರು, ಪರಮಾತ್ಮನ ಸನ್ನಿಧಿ ಪಡೆಯಲು ಗುರು ಕಾರುಣ್ಯ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಭೆಮಳಖೇಡದ ಪೂಜ್ಯ ಷ..ಬ್ರ ಗುರುಪಾದ ಶಿವಾಚಾರ್ಯರು, ಹುಡುಗಿಯ ಷ.ಬ್ರ ವೀರುಪಾಕ್ಷ ಶಿವಾಚಾರ್ಯರು, ನೌಬಾದ್‍ದ ಜ್ಞಾನ ಶಿವಯೋಗಾಶ್ರಮದ ಪೂಜ್ಯ ಡಾ.ರಾಜಶೇಖರ ಸ್ವಾಮಿಜಿ ಗೋರ್ಟಾ, ಪೂಜ್ಯ ಷ.ಬ್ರ ಮೃತ್ಯುಂಜಯ ಶಿವಾಚಾರ್ಯರು, ಗೊಬ್ಬರವಾಡಿಯ ಮ.ನಿ.ಪ್ರ ಪೂಜ್ಯ ಗುರು ಹುನಲಿಂಗೇಶ್ವರ ಸ್ವಾಮಿಜೀ, ಡೋಂಗರಗಾಂವ್‍ನ ಉದಯರಾಜ ದೇಶಿಕೇಂದ್ರ ಸ್ವಾಮಿಜೀ, ಲಾಡಗೇರಿಯ ಪೂಜ್ಯ ಗಂಗಾಧರ ಶಿವಾಚಾರ್ಯ ಸ್ವಾಮಿಜೀ ಸೇರಿದಂತೆ ಇತರರಿದ್ದರು.

Animanl Welfare news

ಅನಧಿಕೃತ ಪ್ರಾಣಿ ಸಾಗಣೆ ತಡೆಯಲು

ಚೆಕ್ ಪೋಸ್ಟ್ ಸ್ಥಾಪಿಸಿ

21.bidar-5ಬೀದರ: ದೇಶದ ಎಲ್ಲಾ ರಾಜ್ಯಗಳ ಗಡಿಯಲ್ಲಿ ಅನಧಿಕೃತ ಪ್ರಾಣಿಗಳ ಸಾಗಣೆ ತಡೆಯಲು ಗಡಿಯಲ್ಲಿ ಪ್ರಾಣಿಗಳ ಪರಿಶೀಲನೆಗಾಗಿ ಪ್ರತ್ಯೇಕ ಚೆಕ್ ಪೋಸ್ಟಗಳನ್ನು ಸ್ಥಾಪಿಸಬೇಕೆಂದು ಭಾರತಿಯ ಪ್ರಾಣಿ ಕಲ್ಯಾಣಿ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ ಮನವಿ ಮಾಡಿದರು.

ಇತ್ತಿಚೀಗೆ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವ ರಾಜನಾಥ ಸಿಂಗ್‍ರನ್ನು ಭೇಟಿ ಮಾಡಿ ಮನವಿ ಮಾಡಿದರು. ಈಗಾಗಲೇ ಕೆಲ ರಾಜ್ಯಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಇಂತಹ ವಿಶಿಷ್ಠ ಕ್ರಮ ಕೈಗೊಂಡಿದ್ದು, ಉಳಿದ ಎಲ್ಲಾ ರಾಜ್ಯಗಳಲ್ಳಿಯೂ ಕೂಡಾ ಪ್ರತ್ಯೇಕ ಚೆಕ್ ಪೋಸ್ಟಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ಬರಗಾಲದ ಛಾಯೆ ಇದ್ದು, ಗೋವುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಹಾಗಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮೇವು ಕೇಂದ್ರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದರು.  ಮಧ್ಯ ರಾತ್ರಿಯಲ್ಲಿ ಕಳ್ಳ ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ ಂಟಿimಚಿಟ Pಡಿoಣeಛಿಣioಟಿ Pಚಿಣಡಿoಟಟiಟಿg (ರಾತ್ರಿ ಗಸ್ತಿನ ಪೊಲೀಸ್ ವ್ಯವಸ್ಥೆ) ಮಾಡಲು ನಿರ್ದೇಶನ ನೀಡಬೇಕೆಂದು ಕೋರಿದರು.

ಕಲ್ಕತ್ತಾ ನಗರದಲ್ಲಿ ಬಕ್ರಿದ ಹಬ್ಬದ ಸಂದರ್ಭವಾಗಿ ಸಾಮೂಹಿಕ ಪ್ರಾಣಿಗಳ ಬಲಿ (ಕುರ್ಬಾನಿ) ಕೊಡುವುದು ಇನ್ನು ಸಂಪ್ರದಾಯದಲ್ಲಿದೆ. ಇದನ್ನು ತಡೆಯುವಲ್ಲಿ ಪಶ್ಚಿಮ ಬಂಗಾಳ ಸರಕಾರ ವಿಫಲವಾಗಿರುವುದರಿಂದ ಕೇಂದ್ರ ಸರ್ಕಾರ ಇದನ್ನು ತಡೆಯಲು ವಿಶೇಷ ಪೊಲೀಸ್ ಪಡೆ ನಿಯೋಜಿಸಬೇಕು ಹಾಗೂ ದೇಶದಲ್ಲಿ ಪ್ರಾಣಿಗಳ ರಕ್ಷಣೆಗಾಗಿ ಅವಶ್ಯಕ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಲ್ಲೇಶ ಗಣಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Picnic Group

ಬಸವ ಬಾಂಧವ್ಯ ಬಳಗದಿಂದ ವನಭೋಜನ ಕಾರ್ಯಕ್ರಮ

ಸುಖವಾಗಿ ಬದುಕಲು ಪ್ರೀತಿ ಹಾಗೂ ಬಾಂಧವ್ಯ ಅಗತ್ಯ: ಡಾ.ಚಂದ್ರೇಗೌಡ

Basava Bandhavya Balaga news3ಬೀದರ: ಜೀವನದಲ್ಲಿ ಸುಖವಾಗಿ ಬದುಕಲು ಸಂಪತ್ತು, ಐಷ್ವರ್ಯ, ಶಕ್ತಿ ಹಾಗೂ ಬುದ್ದಿ ಸೀಮಿತವಲ್ಲ, ಬದಲಿಗೆ ಪ್ರೀತಿ, ಸಂಯಮ, ಶಿಷ್ಟಾಚಾರ, ಎಲ್ಲಕ್ಕಿಂತ ಮಿಗಿಲಾಗಿ ಅನ್ಯುನ್ಯ ಬಾಂಧವ್ಯ ಅಗತ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರೇಗೌಡ ಅಭಿಪ್ರಾಯಪಟ್ಟರು.
ಭಾಲ್ಕಿ ತಾಲೂಕಿನ ಮೈಲಾರ್ ಬಳಿ ಇರುವ ಸಂತೋಷಿ ಮಾತಾ ಮಂದಿರದ ಅವರಣದಲ್ಲಿ ರವಿವಾರ ಬಸವ ಬಾಂಧವ್ಯ ಬಳಗ ಬೀದರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಭೋಜನ ಹಾಗೂ ದಂಪತಿಗಳಿಗಾಗಿ ವಿವಿಧ ಕಾರ್ಯಚಟುವಟಿಕೆ ಹಮ್ಮಿಕೊಂಡು, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.

Jaanpad artist

ಪರಿಶುದ್ಧ ಕಾಯಕದಿಂದ ಪರಿಪೂರ್ಣ ದೇಶಾಭಿವೃದ್ಧಿ:

ವಾಲ್ದೊಡ್ಡಿ ಅಭಿಮತ

19.bidar-6ಬೀದರ: ಜೀವನದಲ್ಲಿ ಪ್ರತಿಯೊಬ್ಬರು ಕಾಯಕ ಜೀವಿಯಾಗಿ, ಪರಿಶುದ್ಧ, ಪ್ರಾಮಾಣಿಕ ಹಾಗೂ ಆರದರ್ಶಕತೆಯಿಂದ ಕೆಲಸ ಮಾಡಿದಲ್ಲಿ ವಯಕ್ತಿಕ ವಿಕಾಸದ ಜೊತೆಗೆ ಆ ದೇಶದ ಪರುಪೂರ್ಣ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಖ್ಯಾತ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಅಭಿಮತ ವ್ಯಕ್ತಪಡಿಸಿದರು.
ನಗರದ ಹನುಮಾನ ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಆಶ್ವಿನಿ ಕುದುರೆ ಕಾಲೇಜಿನ ಅಡಿಟೋರಿಯಮ್ ಹಾಲ್‍ನಲ್ಲಿ ಇತ್ತಿಚೀಗೆ ಅಮೆರಿಕಾದಲ್ಲಿ ಜರುಗಿದ ವಿಶ್ವದ ಮೂರನೇ ನಾವಿಕ ಸಮ್ಮೇಳನದಲ್ಲಿ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿ, ತಮ್ಮ ಕಲಾ ವೈಡುರ್ಯ ಚಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದ ಹಿನ್ನಲೆಯಲ್ಲಿ ಲಾಲಪ್ಪ ಕುದುರೆ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ನಿಂದ ಸನ್ಮಾನಿತರಾಗಿ ಮಾತನಾಡಿದರು.

ಅಮೆರಿಕಾದಲ್ಲಿ ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಯಾರೊಬ್ಬರು ಮನೆಯಲ್ಲಿ ಕುಳಿತು ಕಾಲ ಕಳೆಯದೆ, ನಿರಂತರ ಕಾಯಕ ಯೋಗಿಯಾಗಿ ಬದುಕು ಸಾಗಿಸುತ್ತಿರುವುದರಿಂದಲೇ ಇಂದು ಅದು ಸೂಪರ ಶಕ್ತಿ ಶಾಲಿ ದೇಶವಾಗಿ ನಿಂತಿದೆ. ಜಪಾನ ಸಹ ಎರಡು ಬಾರಿ ವಿಶ್ವ ಮಹಾಯುದ್ದದಲ್ಲಿ ನಶಿಸಿ ಹೋದರೂ ಪೂನಃ ಎಂದಿನಂತೆ ಬೆಳೆದು ನಿಂತಿರುವುದು ಗಮನಿಸಿದರೆ, ಕಾಯಕದಲ್ಲಿ ಅಂತಹ ಶಕ್ತಿ ಅಡಗಿದೆ. ಆದರೆ ನಮ್ಮ ದೇಶದಲ್ಲಿ ಸೋಮಾರಿಗಳ, ಹುಂಬರ, ಅರ್ಧ ಬರ್ಧ ಬುದ್ದಿ ಜೀವಿಗಳ ಹಾವಳಿ ಹೆಚ್ಚಾಗಿ ನಮ್ಮ ದೇಶ ಹಿಂದೆ ಬೀಳಲು ಕಾರಣವಾಗಿದ್ದು, ನಾವು ಸಹ ಅಮೆರಿಕನ್ನರಂತೆ ಸೂಪರ್ ಪಾವರ್ ಆಗಲು ಡಾ.ಅಬ್ದುಲ್ ಕಲಾಮ್‍ರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ವಿಜಯಲಕ್ಷ್ಮೀ ಬಹೆನ್‍ಜಿ, ಬಿ.ಕೆ ಮಂಗಲಾ ಬಹೆನ್‍ಜಿ ಸಾನಿಧ್ಯ ವಹಿಸಿದ್ದರು. ಭಾರತಿಯ ಜನಪಾ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವರಾಜ ಕುದುರೆ ಪ್ರಾಸ್ತಾವಿಕ ಮಾತನಾಡಿ, ಶಂಭುಲಿಂಗ ವಾಲ್ದೊಡ್ಡಿಯವರು ಜಿಲ್ಲೆಯ ಕಲಾವಿದರಿಗೆ ಪ್ರೇರಣಾದಾಯಕರು ಹಾಗೂ ಮಾದರಿ ಪ್ರಾಯರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಯುವ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬರುವಂತೆ ಕರೆ ನೀಡಿದರು.

ಲಾಲಪ್ಪ ಕುದುರೆ ಏಜ್ಯುಕೇಶನ್ ಐಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶಂಭುಲಿಂಗ ಕುದುರೆ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ ಶೇಖರಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಜೈಶ್ರೀ ಕುದುರೆ ಹಾಗೂ ಖಜಾಂಚಿ ಆಶ್ವಿನಿ ಕುದುರೆ ವೇದಿಕೆಯಲ್ಲಿದ್ದರು.
ಇದಕ್ಕೂ ಮುನ್ನ ಜಿಲ್ಲೆಯ ವಿವಿಧ ಸಂಘಟನೆಗಳಿಂದ ವಾಲ್ದೊಡ್ಡಿಯವರನ್ನು ಆತ್ಮಿಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಗನ್ನಾಥ ದೇವರ್ಷಿ, ರಾಜಕುಮಾರ ವರ್ಮಾ, ಸುರೇಶ ಕುದುರೆ, ಶಿವಮೂರ್ತಿ ಕುದುರೆ, ಲಕ್ಷ್ಮೀ ಒಂಟೆ ಸೇರಿದಂತೆ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರು, ಕಾಲೇಜಿನ ಸಿಬ್ಬಂದಿಗಳು ಇದ್ದರು.
ಆರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ರಮೇಶ ಶಿಂಧೆ ಸ್ವಾಗತಿಸಿದರೆ, ರಾಜ್ಯ ಯುವ ಪ್ರಶಸ್ತಿ ಪುರಷ್ಕøತ ಮಹೇಶ ಗೋರನಾಳಕರ್ ನಿರುಪಿಸಿ, ವಂದನೆ ಸಲ್ಲಿಸಿದರು.