Daily Archives: August 30, 2015

Farmers Monthly Meeting

ಸೆ.1 ರಂದು ರೈತ ಸಂಘದ ಮಾಸಿಕ ಸಭೆ

ಬೀದರ: ನಗರದ ಗಾಂಧಿ ಗಂಜ್‍ನಲ್ಲಿನ ರೈತ ಭವನದಲ್ಲಿ ಸೆಪ್ಟೆಂಬರ್ 1ರಂದು ಬೆಳಿಗ್ಗೆ 10.30 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ ಕೌಠಾ ಅವರ ಅಧ್ಯಕ್ಷತೆಯಲ್ಲಿ ಸಂಘದ ಮಾಸಿಕ ಸಭೆ ಹಮ್ಮಿಕೊಳ್ಳಲಾಗಿದೆ.

ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸರ್ಕಾರ ಬರಗಾಲ ಘೋಷಣೆ ಮಾಡಿದರೂ ಇಲ್ಲಿಯ ವರೆಗೆ ಜಿಲ್ಲೆಯ ಅನ್ನದಾತನಿಗೆ ಯಾವುದೊಂದು ಸಹಕಾರ ದೊರೆಯದಿರುವುದರ ಬಗ್ಗೆ, ಕಳೆದ ವರ್ಷ ಘೋಷಣೆಯಾಗಿದ್ದ ಬರಗಾಲದ ಸಹಾಯ ಧನ ಇನ್ನು ಹಲವು ರೈತರಿಗೆ ಬಾರದೆ ಇರುವುದು, ಕಳೆದ ವರ್ಷದ ಕಬ್ಬಿನ ಬಾಕಿ ಹಣ ಕೊಡದೆ, ವಿಳಂಬ ನೀತಿ ಅನುಸರಿಸುತ್ತಿರುವುದರ ಹಾಗೂ 2014-15ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಪೂರೈಸಿರುವ ರೈತರಿಗೆ ಹಣ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ ನಾಲ್ಕು ಕಾರ್ಖಾನೆಗಳಿಗೆ ಬೀಗ ಜಡಿದಿದ್ದರೂ ಇಲ್ಲಿಯ ವರೆಗೆ ಆಯಾ ಕಾರ್ಖಾನೆಗಳು ರೈತರಿಗೆ ಕೊಡಬೇಕಾಗಿದ್ದ ಹಣ ಕೊಡಿಸುವ ಜವಾಬ್ದಾರಿ ಡಿಸಿ ಅವರ ಆದ್ಯ ಕರ್ತವ್ಯವಾಗಿದ್ದರೂ ಜಿಲ್ಲಾಡಳಿತ ಸಹ ಈವರೆಗೆ ಮೌನಾನುಷ್ಠಾನದಲ್ಲಿರುವ ಕಾರಣ ಕುರಿತು ಗಂಭೀರ ಚರ್ಚೆ ನಡೆಯಲಿದೆ.