Daily Archives: August 15, 2015

Shrishailya Event

Today Onwards: ಶ್ರೀಶೈಲದಲ್ಲಿ ಕರುಣಾದೇವಿಯ 49ನೇ ಅನುಷ್ಠಾನಾರಂಭ

ಬೀದರ: ನಾಳೆಯಿಂದ ಮುಂದಿನ ಒಂದು ತಿಂಗಳ ವರೆಗೆ ದ್ವಾದಶ ಜ್ಯೋತೀರ್ಲಿಂಗಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶದ ಶ್ರೀಶೈಲಂ ಮಹಾಕ್ಷೇತ್ರದಲ್ಲಿರುವ recent-3ಅಕ್ಕ ಮಹಾದೇವಿ ಚೈತನ್ಯ ಕೇಂದ್ರದಲ್ಲಿ ಮಹಾತಪಸ್ವಿಗಳಾದ ಪೂಜ್ಯ  ಕರುಣಾದೇವಿ ಮಾತಾ ಅವರ 49ನೇ ಶಿವಯೋಗ ಅನುಷ್ಠಾನ ನಡೆಯಲಿದೆ.
ಅನುಷ್ಠಾನ ಮೂರ್ತಿಗಳೆಂದೇ ಖ್ಯಾತರಾಗಿರುವ ಮಾತಾ ಅವರು ಈವರೆಗೆ ಬೇರೆ ಬೇರೆ ಕಡೆಗಳಲ್ಲಿ 48 ಅನುಷ್ಠಾನಗಳನ್ನು ಪೂರೈಸಿರುವರು. ಶ್ರೀಶೈಲದಲ್ಲಿ  ಕರುಣಾದೇವಿ ಮಾತಾ ಅವರು ವೈರಾಗ್ಯ ನಿಧಿ ಅಕ್ಕಮಹಾದೇವಿ ಚೈತನ್ಯ ಕೇಂದ್ರ ನಿರ್ಮಾಣ ಮಾಡುತ್ತಿರುವರು. ಶ್ರೀಶೈಲಕ್ಕೆ ಬರುವ ಭಕ್ತಾದಿಗಳು ಚೈತನ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತಾ ಅವರ ಹಾಗೂ ಅಕ್ಕಮಹಾದೇವಿ ಜ್ಯೋತಿ ದರ್ಶನ ಪಡೆಯಬೇಕೆಂದು  ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸಂಚಾಲಕ ಡಾ|| ರಾಜಶೇಖರ ಸ್ವಾಮೀಜಿ ಗೋರಟಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.