Daily Archives: August 12, 2015

Siddaramayya Birthday event

CM Siddaramayya birth day prgm in siddaramayya ItI College4CM SiddaramayyaCM Siddaramayya birth day prgm in siddaramayya ItI College1

BirthDay Program in

Siddaramayya ItI College

 

ಶೋಷಿತ ಜನಾಂಗದ ಅಭಿವೃದ್ಧಿಯಲ್ಲಿ ರಾಜ್ಯದ ಹಿತ ಅಡಗಿದೆ: ವಿಜಯಸಿಂಗ್

ಬೀದರ: ಅತ್ಯಂತ ಕೆಳವರ್ಗದ, ಬಡ ಹಾಗೂ ದೀನ ದಲಿತರ, ಶೋಷಿತ ಜನಾಂಗದ ಅಭಿವೃದ್ಧಿಯಾದಲ್ಲಿ ನಾಡಿನ ಪ್ರಗತಿ ಸಾಧ್ಯವಿದೆ ಎಂದು ಕಾಂಗ್ರೆಸ್ ಮುಖಂಡ ವಿಜಯಸಿಂಗ್ ಅಭಿಪ್ರಾಯಪಟ್ಟರು.
ಬುಧವಾರ ನಗರದ ರಾಮನಗರದಲ್ಲಿರುವ ಸಿದ್ಧರಾಮಯ್ಯ ಐಟಿಐ ಕಾಲೇಜಿನ ಅವರಣದಲ್ಲಿ ಸಿದ್ಧರಾಮಯ್ಯ ಐಟಿಐ ಕಾಲೇಜು ಹಾಗೂ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ರಾಜ್ಯದ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ 68ನೇ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೆಲವೆ ಕ್ಷಣಗಳಲ್ಲಿ ಬಡ ಜನರ ಹೊಟ್ಟೆ ತುಂಬಿಸಲು ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಜನ ಹಿತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಕ್ಷ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಈ ನಾಡಿನ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಮಹತ್ತರ ಯೋಜನೆ ಜಾರಿಗೆ ತರುವ ಮೂಲಕ ದೇಶದ ಅಭಿವೃದ್ಧಿಗೆ ನಾಂದಿ ಹಾಡುವಲ್ಲಿ ಯಶಸ್ವಿಯಾದರು ಎಂದ ಅವರು, ಒಟ್ಟಾರೆ ಈ ನಾಡಿನ ಶೋಷಿತರ ಉದ್ಧಾರಕ್ಕಾಗಿ ಸಿಎಂ ಅವರ ಕಾರ್ಯವೈಖರಿ ಯುವಜನರಿಗೆ ಪ್ರೇರಣಾದಾಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿದ್ಧರಾಮಯ್ಯ ಐಟಿಐ ಕಾಲೇಜಿನ ಅಧ್ಯಕ್ಷೆ ಗೀತಾ ಪಂಡಿತರಾವ ಚಿದ್ರಿ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಈ ಜಿಲ್ಲೆಯಲ್ಲಿನ ಶೋಷಿತ ವರ್ಗಗಳ ಸರ್ವಾಂಗಿಣ ಪ್ರಗತಿಗಾಗಿ ಶೋಷಿತ ವರ್ಗಗಳ ಒಕ್ಕೂಟ ಕಾರ್ಯ ಮಾಡುತ್ತಿದ್ದು, ಬಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷ ಮಾದರಿ ಪ್ರಾಯವಾಗಿ ಕಾರ್ಯ ನಿರ್ವಹಿಸಿ ಈ ನಾಡಿಗೆ ಅನ್ನಭಾಗ್ಯ, ಕ್ಷಿರಭಾಗ್ಯ, ಅಲ್ಪಸಂಖ್ಯಾತ ಮಹಿಳೆಯರಿಗೆ ಶಾದಿ ಭಾಗ್ಯ ಸೇರಿದಂತೆ ಕೆಲಸವಿಲ್ಲದ ಕೈಗಳಿಗೆ ಕೆಲಸ ಕೊಟ್ಟು ಅಣ್ಣ ಬಸವಣ್ಣನವರ ಕಾರ್ಯವೈಖರಿಯನ್ನು ನಮ್ಮ ಮುಖ್ಯಮಂತ್ರಿಗಳು ಮುಂದು ವರೆಸಿರುವುದು ಪುಣ್ಯದ ಕೆಲಸ ಎಂದವರು ತಿಳಿಸಿದರು.

ಮಾಜಿ ಶಾಸಕ ಮಾರುತಿರಾವ ಮುಳೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಈ ನಾಡಿನ ಬಡಜನರ ಹಾಗೂ ಅಲ್ಪಸಂಖ್ಯಾತ ಕುಟುಂಬಗಳಿಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತೆರುವ ಮೂಲಕ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಎಲ್ಲ ಯೋಜನೆಗಳನ್ನು ಜಾರಿಗೊಳಿಸಿ ಈ ನಾಡಿಗೆ ಸಮರ್ಪಿಸುವ ಮೂಲಕ ದಿಟ್ಟತನ ಮೆರೆದಿರುವ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.

ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಕಡ್ಯಾಳ್ ಮಾತನಾಡಿ, ಇಂದು ಇಡೀ ದೇಶದಲ್ಲಿ  ಸಿಎಂ ಸಿದ್ಧರಾಮಯ್ಯನವರ ತವರೂರು ಮೈಸುರು ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಬರಬೇಕಾದರೆ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಹಾಗೂ ಬಿಎಸ್‍ಪಿಯವರಲ್ಲಿ ಸಂಘಟನಾ ಚಾತುರ್ಯತೆ ಇದ್ದ ಹಾಗೆ ಸಿದ್ಧರಾಮಯ್ಯನವರ ಅಭಿಮಾನಿ ಬಳಗದವರ ಸಂಘಟನಾ ಸಾಮಥ್ರ್ಯ ಮೆಚ್ಚುವಂಥದ್ದು ಎಂದರು.

ಶೋಷಿತ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಅನಿಲಕುಮಾರ ಬೆಲ್ದಾರ್ ಪ್ರಾಸ್ತಾವಿಕ ಮಾತನಾಡಿ, ಸಿಎಂ ಸಿದ್ಧರಾಮಯ್ಯನವರು ಒಬ್ವ ಹಿಂದುಳಿದ ವರ್ಗಗಳ ಮುಖಂಡರಾಗಿದ್ದರೂ ಇಂದು ಇಡೀ ದೇಶ ಮೆಚ್ಚುವಂತಹ ರೀತಿಯಲ್ಲಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಸರ್ವೊತ್ತಮ ಕಾರ್ಯ ಕೈಗೊಂಡು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಕಾರ್ಯ ವೈಖರಿ ಎಲ್ಲ ಪಕ್ಷಗಳು ಮೆಚ್ಚುವಂತಹದ್ದು ಎಂದರು.

ಕಾಂಗ್ರೆಸ್ ಮುಖಂಡರಾದ ಮನ್ನಾನ್ ಸೇಟ್, ರೊಹಿದಾಸ್ ಘೋಡೆ ಮಾತನಾಡಿದರು. ಹಟಕರ್ ಸಮಾಜದ ಜಿಲ್ಲಾಧ್ಯಕ್ಷ ಸಿದ್ದೊಬಾ ಲೌಟೆ ಹಾಗೂ ಮರಾಠಾ ಸಮಾಜದ ಅಧ್ಯಕ್ಷ ನಾರಾಯಣ ಗಣೇಶ ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಚಿನ್ಬಮ್ಮ ಲಾಧಾ ಅವರು ಸಿಎಂ ಸಿದ್ಧರಾಮಯ್ಯನವರ ಸರ್ಕಾರದ ಯೋಜನೆಗಳ ಬಗ್ಗೆ ಹಾಡುಗಳನ್ನು ಹಾಡಿದರು. ಶೋಷಿತ ವರ್ಗಗಳ ಒಕ್ಕೂಟದ ಯುವ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್ ಸ್ವಾಗತಿಸಿದರೆ, ಒಕ್ಕೂಟದ ಸಂಚಾಲಕ ಮಾರುತಿ ಸಿಕೆನ್‍ಪೂರೆ ಕಾರ್ಯಕ್ರಮ ನಿರೂಪಿಸಿದರು. ಅಂಬಿಗರ ಚೌಡಯ್ಯ ಯುವ ಸೇನೆ ಪ್ರಧಾನ ಕಾರ್ಯದರ್ಶಿ ಚಂದು ಹಳ್ಳಿಖೇಡಕರ್ ವಂದಿಸಿದರು.

ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಸೆ ರೋಜ್ ಮೇರಿ, ಮುಖಂಡರಾದ ವಿಲಾಸ ರಾಜಗೊಂಡ, ಸುನಿಲ ಬಾವಿಕಟ್ಟಿ, ಸಂಗಮೆಶ ಏಣಕೂರ್, ಕಲಾವತಿ ಆನಂದೆ, ಜಗದೇವಿ ಚಿಟ್ಟಾ, ಪಂಪಾದೇವಿ ಪಾಟೀಲ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು, ಶೋಷಿತ ವರ್ಗಗಳ ಪದಾಧಿಕಾರಿಗಳು ಹಾಗೂ ನೂರಾರು ಸಿದ್ಧರಾಮಯ್ಯ ಹಾಗೂ ಪಂಡಿತರಾವ ಚಿದ್ರಿ ಅಭಿಮಾನಿಗಳು ಉಪಸ್ಥಿತರಿದ್ದರು.

Sanjevani : District Reporter :: Mr.Shivkumar Swamy

Ganyogi Panchakshara Gavai Award

ಮಂಗಲಾ ಮರಕಲೆಗೆ ಗಾನಯೋಗಿ

ಪಂಚಾಕ್ಷರ ಗವಾಯಿ ಪ್ರಶಸ್ತಿ: ಹರ್ಷ

MangalaMarkal_GavaiAwardಬೀದರ: ಕರ್ನಾಟಕ ಬಾಲವಿಕಾಸ ಅಕಾಡೆಮಿ ನೂತನ ಸದಸ್ಯರೂ, ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರೂ ಆದ ಮಂಗಲಾ ಮರಕಲೆ ಅವರಿಗೆ ಗಾನಯೋಗಿ ಪಂಚಾಕ್ಷರ ಗವಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇತ್ತಿಚೀಗೆ ಬೆಂಗಳುರಿನ ಜೆ.ಸಿ ರಸ್ತೆಯಲ್ಲಿರುವ ರವಿಂದ್ರ ಕಲಾ ಕ್ಷೇತ್ರದ ಪಕ್ಕ ಇರುವ ನಯನ ಕನ್ನಡ ಭವನದಲ್ಲಿ ಕರ್ನಾಟಕ ಚಲನ ಚಿತ್ರ ರಂಗದ ಹಿರಿಯ ಕಲಾವಿದರಾದ ಆರ್.ಅಸ್ವತ್‍ನಾರಾಯಣರವರ ಪುತ್ರಿ ಲೀಲಾನಾರಾಯಣರವರಿಂದ ಸ್ಥಾಪಿತವಾದ ಕರ್ನಾಟಕ ನವಚೇತನ ಕಲಾನಿಕೇತನ ಸಾಂಸ್ಕøತಿಕ ಸಂಘಟನಾ ಕೇಂದ್ರದಿಂದ ಜರುಗಿದ ರಾಜ್ಯ ಮಟ್ಟದ ಸಾಂಸ್ಕøತಿಕ ಜಾನಪದ ರಂಗೋತ್ಸವ-2015ರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮಂಗಲಾ ಒಬ್ಬ ಅಂಗವಿಕಲೆಯಾದರೂ ತನ್ನಲ್ಲಿನ ಪ್ರಬುದ್ಧತೆ ಹೊರ ಹಾಕಿ, ತಾನೂ ಸಹ ಜೀವನದಲ್ಲಿ ಹೊಸದನ್ನು ಸಾಧಿಸಬೇಕೆಂಬ ಛಲಗಾರಿಕೆ ಇಟ್ಟುಕೊಂಡು

ನೂರಾರು ವಿಕಲಚೇತನ ಯುವತಿಯರಿಗೆ ಕೌಶಲ್ಯಾಧಾರಿತ ಹಾಗೂ ಸಾಂಸ್ಕøತಿಕ ತರಬೇತಿ ಜೊತೆಗೆ ಸುಮಾರು ಮಹಿಳೆಯರಿಗೆ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲು ಪ್ರೇರಣೆ ನೀಡಿ, ಅವರ ಆರ್ಥಿಕ ಪ್ರಗತಿಗೆ ಕಾರಣಿಕರ್ತೆಯಾದ ಇವರು ಇತ್ತಿಚೀಗೆ ಕರ್ನಾಟಕ ಸರ್ಕಾರದ ಬಾಲವಿಕಾಸ ಅಕಾಡೆಮಿಗೆ ನೇಮಕವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇವರಿಗೆ ಪ್ರಶಸ್ತಿ ದೊರತ್ತಿರುವುದಕ್ಕೆ ಭಾರತಿಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಯ್ಯ ಸ್ವಾಮಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯರುಗಳಾದ ಶಿವಕುಮಾರ ಸ್ವಾಮಿ, ಮಹೇಶ ಗೋರನಾಳಕರ್, ಶಾಮರಾವ ನೆಲವಾಡೆ, ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಶಂಭುಲಿಂಗ ವಾಲ್ದೊಡ್ಡಿ, ರಾಷ್ಟ್ರೀಯ ಕಿರಿಯ ಸಂಶೋಧನಾ ಫೆಲೋಶಿಪ್ ಪುರಸ್ಕøತರಾದ ರಾಜಕುಮಾರ ಹೆಬ್ಬಾಳೆ ಹಾಗೂ ಇತರರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

 

Sanjevani :: News Reporter :: Mr.Shivkumar Swamy