Daily Archives: August 10, 2015

Indian Science Technology

ಭಾರತ ಜ್ಞಾನ ವಿಜ್ಞಾನ ಸಮಿತಿಗೆ ನೇಮಕ

ಬೀದರ: ಭಾರತ ಜ್ಞಾನ ವಿಜ್ಞಾನ ಸಮಿತಿಯ ಭಾಲ್ಕಿ ಹಾಗೂ ಹುಮನಾಬಾದ್ ತಾಲೂಕು ಅಧ್ಯಕ್ಷರುಗಳ ನೇಮಕ ಮಾಡಲಾಗಿದೆ.
ಭಾಲ್ಕಿ ತಾಲೂಕಿನ ಅಧ್ಯಕ್ಷರಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನ್ ಬೇಂದ್ರೆ ನೇಮಕ ಗೊಂಡರೆ, ಹುಮನಾಬಾದ್ ತಾಲೂಕು ಅಧ್ಯಕ್ಷರಾಗಿ ಗಡವಂತಿ ಪ್ರೌಢಶಾಲೆಯ ಮುಖ್ಯ ಗುರು ಕಾಶಿನಾಥ ಕೂಡ್ಲಿ ನೇಮಕವಾಗಿರುತ್ತಾರೆ. ಅದೇ ರೀತಿ ಹುಮನಾಬಾದ್ ತಾಲೂಕು ಕಾರ್ಯದರ್ಶಿಯಾಗಿ ಸರ್ವೋದಯ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಾಂತಕುಮಾರ ಯಲಾಲ್ ನೇಮಕಗೊಂಡಿದ್ದಾರೆ.
ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ್ ನೇಮಕ ಮಾಡಿ ಈ ಆದೇಶ ಹೊರಡಿಸಿ, ಈ ಮೂವರು ಕೂಡಲೆ ತಮ್ಮ ಹುದ್ದೆಯ ಜವಾಬ್ದಾರಿ ವಹಿಸಿಕೊಂಡು, ವೈಜ್ಞಾನಿಕ ಜಾಗೃತಿಗೆ ಮುಂದಾಗುವಂತೆ ಆದೇಶದಲ್ಲಿ ತಿಳಿಸಿದ್ದಾರೆ.