ಭಕ್ತಿ ಸಂಭ್ರಮದ ಮಧ್ಯ ಶಾಂತಿ ಪ್ರಭಾತಫೇರಿ ಅಂತ್ಯ

ಭಕ್ತಿ ಸಂಭ್ರಮದ ಮಧ್ಯ ಶಾಂತಿ ಪ್ರಭಾತಫೇರಿ ಅಂತ್ಯ

DSC02991ಬೀದರ: ಸಿಖ್ಖರ ಗುರು ಗುರುನಾನಕರ 546ನೇ ಜಯಂತಿ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಸಹ ದೇಶದ ಆಂತರಿಕ ಹಾಗೂ ಭಾಹ್ಯ ದುಷ್ಟ ಶಕ್ತಿಗಳಿಗೆ ಭಗವಂತನು ಓಳ್ಳೆಯ ಮನಸ್ಸು ಕೊಟ್ಟು, ಮನುಷ್ಯ ಮನುಷ್ಯರಲ್ಲಿರುವ ಜಾತಿ ಧರ್ಮಗಳೆಂಬ ಅಡ್ಡ ಗೋಡೆ ಓಡೆದು ಹಾಕಿ, ಸಹೋದರತ್ವ ಮೆರೆದು ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸಲು, ನ.20ರಿಂದ ಹಮ್ಮಿಕೊಂಡ ಶಾಂತಿ ಪ್ರಭಾತಫೇರಿ ಇಂದು ಭಕ್ತಿ ಸೌಹಾರ್ದತೆ ನಡುವೆ ಅಂತ್ಯ ಕಂಡಿತ್ತು.
ಐದು ದಿನಗಳ ವರೆಗೆ ನಡೆದ ಈ ಪ್ರಭಾತಫೇರಿಯು ಮಂಗಳವಾರ ಕೊನೆಯ ದಿನವಾಗಿದ್ದು, ಎಂದಿನಂತೆ ನಸುಕಿನ ನಾಲ್ಕು ಗಂಟೆಗೆ ನಗರದ ಗುರುದ್ವಾರದಿಂದ ಆರಂಭವಾಗಿ ಗುರುನಗರದ ಬೀದಿ ಬೀದಿಗಳಲ್ಲಿ ಶಾಂತಿ ಸಂದೇಶ ಸಾರುವ ಮಂತ್ರ ಜಪಿಸುತ್ತ, ನಾನಕಜೀ ಅವರ ಹೆಸರಲ್ಲಿ ಭಜನೆ ಮಾಡುತ್ತ ಸಾಗಿತ್ತು.

ದಾರಿಯುದ್ದಕ್ಕು ಎಲ್ಲ ಧರ್ಮಿಯ ಸುಮಂಗಲೆಯರು ಆರಿತಿ ಮಾಡಿ, ತೆಂಗಿನಕಾಯಿ ಒಡೆದು ಪ್ರಸಾದ ವಿತರಿಸಿದರು. ಎಲ್ಲ ವರ್ಗದ ಜನ ಪ್ರಭಾತಫೇರಿಯಲ್ಲಿ ಜಮಾಯಿಸಿ, ಭಾವ್ಯಕ್ಯತೆ ಪ್ರದರ್ಶಿಸಿದರು. ಗುರುನಾನಕರ ಹಲವು ಭಕ್ತಾದಿಗಳು ದಾರಿಯುದ್ದಕ್ಕೂ ಹಾಲು, ಹಣ್ಣು ಬಿಸ್ಕತ್ತು ಹಂಚಿ ಏಕತೆಯ ಮಂತ್ರ ಜಪಿಸಿದರು. ಮೆರವಣಿಗೆಯು ಬೆಳಿಗ್ಗೆ 6.30 ಗಂಟೆಗೆ ಅಂತ್ಯ ಕಂಡು, ಉಪಹಾರ ಸೇವಿಸಿ, ತಮ್ಮ ತಮ್ಮ ಮನೆಗಳಿಗೆ ತೆರಳಿದರು.
ಹಿರಿಯ ಗ್ರಂಥವಾಚಕ ಹರಪಾಲಸಿಂಗ್ ಅವರು ಪ್ರಭಾತಫೇರಿಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಗುರುದ್ವಾರಾ ಪ್ರಬಂಧಕ ಸಮಿತಿ ಅಧ್ಯಕ್ಷ ಸರ್ದಾರ ಬಲಬೀರ ಸಿಂಗ್, ಪ್ರಮುಖರಾದ ಜ್ಞಾನಿ ದರ್ಬಾರಾಸಿಂಗ್, ಪ್ರಬಂಧಕ ಸಮಿತಿ ಸದಸ್ಯರುಗಳಾದ ಸರ್ದಾರ ತೇಜಪಾಲಸಿಂಗ್, ಮನಿಪ್ರೀತಸಿಂಗ್, ಪರ್ದಿಪಸಿಂಗ್, ಚರಣಸಿಂಗ್‍ಜೀ ಕಾರಸೇವಾ, ಗುರುಪ್ರೀತಸಿಂಗ ಸೇರಿದಂತೆ ಸಿಖ್ಖ ಸಮುದಾಯದ ನೂರಾರು ಯುವಕರು, ಮಹಿಳೆಯರು, ಮಕ್ಕಳು ಹಾಗೂ ಇತರರು ಭಾಗವಹಿಸಿ ಮೆರವಣಿಗೆ ಕಳೆ ಇಮ್ಮಡಿಗೊಳಿಸಿದರು.

Leave a Reply

Your email address will not be published. Required fields are marked *