ಜ್ಯೋತಿ ಯಾತ್ರೆ Event in bellur

ಚಿತ್ರ: 29ಬೀದರ1 :
ಬೀದರ: ತಾಲೂಕಿನ ಬೆಳ್ಳೂರ ಗ್ರಾಮದ ಶ್ರೀಸಚ್ಚಿದಾನಂದಾಶ್ರಮ ಶ್ರೀಸಿದ್ಧಾರೂಢ ಮಠದಲ್ಲಿ, ಬೆಳ್ಳೂರಿನಿಂದ ಚಳಕಾಪೂರ ವರೆಗಿನ ಜ್ಯೋತಿ ಯಾತ್ರೆಗೆ ಶ್ರೀಗಣೇಶಾನಂದ ಮಹಾರಾಜರು ಚಾಲನೆ ನೀಡಿದರು.

ರೈತರ ಶ್ರೇಯೋಭಿವೃದ್ಧಿಗಾಗಿ ಜ್ಯೋತಿ ಯಾತ್ರೆ29bdr-1
ಅತಿವೃಷ್ಠಿ ಮತ್ತು ಅನಾವೃಷ್ಠಿಗೊಳಗಾದ ರೈತರಿಗೆ ಆತ್ಮಸ್ಥೈರ್ಯ ಅತ್ಯವಶ್ಯಕ – ಗಣೇಶಾನಂದಜೀ
ಬೀದರ: ಅತಿವೃಷ್ಠಿ ಮತ್ತು ಅನಾವೃಷ್ಠಿಗಳಿಂದ ಕಂಗಾಲಾಗಿರುವ ಈ ಭಾಗದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಅತ್ಯವಶ್ಯಕವಾಗಿದೆ. ಹೀಗಾಗಿ ಬೆಳ್ಳೂರಿನಿಂದ ಚಳಕಾಪೂರದ ವರೆಗೆ ಜ್ಯೋತಿ ಯಾತ್ರೆ ಪ್ರಾರಂಭಿಸಲಾಗಿದೆ ಎಂದು ಗುರುದೇವಾಶ್ರಮ ಬೀದರಿನ ಪೂಜ್ಯಶ್ರೀ ಗಣೇಶಾನಂದಜೀ ಮಹಾರಾಜರು ಹೇಳಿದರು.
ತಾಲೂಕಿನ ಬೆಳ್ಳೂರು ಗ್ರಾಮದ ಶ್ರೀಸಚ್ಚಿದಾನಂದಾಶ್ರಮ ಶ್ರೀಸಿದ್ಧಾರೂಢಮಠದಲ್ಲಿ, ಶ್ರೀಮಠದ ವತಿಯಿಂದ ಗುರುವಾರ ಪ್ರಾರಂಭಿಸಿದ ರೈತರ ಶ್ರೇಯಸ್ಸಿಗಾಗಿ ಶ್ರೀಸಿದ್ಧಜ್ಯೋತಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರು ಸುಮಾರು ಮೂರ್ನಾಲ್ಕು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿ ಪ್ರಸ್ತುತ ಸಾಲಿನಲ್ಲಿ ಅತಿವೃಷ್ಠಿಗೆ ತುತ್ತಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಠಮಾನ್ಯಗಳಿಂದಾಗಬೇಕು. ಈ ನಿಟ್ಟಿನಲ್ಲಿ ಬೆಳ್ಳೂರಿನ ಶ್ರೀಸಚ್ಚಿದಾನಂದಾಶ್ರಮದ ಮಾತೋಶ್ರೀ ಅಮೃತಾನಂದ ಮಯಿಯವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
ಜ್ಯೋತಿ ಯಾತ್ರೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾತೆ ಅಮೃತಾನಂದ ಮಯಿಯವರು, ಬರುವ ಅಕ್ಟೋಬರ್ 21 ರಿಂದ 25 ರ ವರೆಗೆ ಶ್ರೀಮಠದಲ್ಲಿ ಸದ್ಗುರು ಸಚ್ಚಿದಾನಂದ ಸಮಾಸ್ವಾಮಿಗಳ ಮಂದಿರದ ಕಳಸಾರೋಹಣ ಮತ್ತು ಅಮೃತ ಶಿಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ಯ ನಾಡಿದ ಮಹಾತ್ಮರಿಂದ ಪ್ರವಚನ ಮತ್ತು ಗಣ್ಯರ ಆಗಮನವಿದೆ. ಇಂತಹ ಸಂದರ್ಭದಲ್ಲಿ ಈ ಭಾಗದ ರೈತರು ಅತಿವೃಷ್ಠಿಯಿಂದ ಹಾನಿಗೊಳಗಾಗಿದ್ದಾರೆ. ಅವರ ಶ್ರೇಯೋಭಿವೃದ್ದಿಗಾಗಿ ಮತ್ತು ಅವರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಬೆಳ್ಳೂರಿನಿಂದ ಹೊರಟ ಶ್ರೀಸಿದ್ದ ಜ್ಯೋತಿಯಾತ್ರೆಯು ಕೋಳಾರ, ಬೆಳ್ಳೂರ ದೇವಿಮಂದಿರ, ಕಮಠಾಣಾ ಮೂಲಕ ಮಳಚಾಪೂರ ಶ್ರೀಸಿದ್ದಾರೂಢಮಠ, ನೀಲಮನಹಳ್ಳಿಯ ಸಚ್ಚಿದಾನಂದ ಮಹಾಸ್ವಾಮಿಗಳ ಜನ್ಮಸ್ಥಳ, ಬ್ಯಾಲಹಳ್ಳಿಯ ಶ್ರೀಶಿವಾನಂದ ಕೈಲಾಸ ಆಶ್ರಮದ ಮೂಲಕ ಹಳ್ಳಿಖೇಡ(ಬಿ)ಯ ಸೀಮಿ ನಾಗಣ್ಣಾ ದೇಸ್ಥಾನದಲ್ಲಿ ಗುರುವಾರ ರಾತ್ರಿ ವಾಸ್ತವ ಹೂಡುವುದು ನಂತರ ಶುಕ್ರವಾರ ಬೆಳಿಗ್ಗೆ ಚಳಕಾಪುರದ ಆಂಜನೇಯ ದೇವಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ ಕೈಗೊಂಡು, ಬ್ರಹ್ಮ ವಿದ್ಯಾಶ್ರಮ ಶ್ರೀ ಸಿದ್ಧಾರೂಢರ ಮಠದಲ್ಲಿ ಸಮಾವೇಶ ಗೊಳ್ಳುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಮರಾವ ಮಂದಕನಳ್ಳಿ, ಕಾಶಿನಾಥ ಹೆಡಗಾಪೂರೆ, ವೈಜಿನಾಥಪ್ಪ ಮಹಾದಪ್ಪ ನಾವದಗಿ, ಸೇರಿದಂತೆ ಮುಂತಾದವರು ಇದ್ದರು.


 

Leave a Reply

Your email address will not be published. Required fields are marked *