ಗ್ರೀಟಿಂಗ್ ಕಾರ್ಡ್ ತಯಾರಿಸುವ ಸ್ಪರ್ಧೆ

ಬೀದರ್: ರೋಟರಿ ಕ್ಲಬ್ ವತಿಯಿಂದ ಶನಿವಾರ ನಗರದ ಜ್ಞಾನಸುಧಾ ಶಾಲೆಯಲ್ಲಿ ಗ್ರೀಟಿಂಗ್ ಕಾರ್ಡ್ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.ಪ್ರಾಥಮಿಕ ತರಗತಿಯ ಸುಮಾರು 200 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವಿದ್ಯಾರ್ಥಿಗಳಲ್ಲಿ ವರುಣ, ಕೃಷ್ಣಾ, ರಿತೇಶ, ಗಣೇಶ ಹಾಗೂ ಅಶೋಕ್ ಅವರಿಗೆ ಬಹುಮಾನಗಳನ್ನು ನೀಡಲಾಯಿತು.ಪ್ರಶಸ್ತಿ ವಿಜೇತರಿಗೆ ಬಾಲ ಕಲಾವಿದೆ ಮೇಘಾ ಅರವಿಂದ ಹಳ್ಳಿಖೇಡೆ ಅವರಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಸ್ಪರ್ಧೆಯ ತೀರ್ಪುಗಾರರಾಗಿದ್ದ ಹಿರಿಯ ಕಲಾವಿದ ಹಾಗೂ ಕರ್ನಾಟಕ ಚಿತ್ರಕಲಾ ಅಕಾಡೆಮಿ ಸದಸ್ಯ ಬಿ.ಕೆ. ಬಡಿಗೇರ ಅವರು ವಿದ್ಯಾರ್ಥಿಗಳಿಗಾಗಿ ಸ್ಥಳದಲ್ಲೇ ಚಿತ್ರ ಬಿಡಿಸಿ ತೋರಿಸಿದರು. ಶಾಲೆಯ ಅಧ್ಯಕ್ಷರಾದ ಪ್ರೊ. ಪೂರ್ಣಿಮಾ ಜಿ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯ ಆಯ್ದುಕೊಂಡು ಉನ್ನತ ಶಿಕ್ಷಣ ಪಡೆಯಬೇಕೆಂದು ಕಿವಿಮಾತು ಹೇಳಿದರು.  ರೋಟರಿ ಸಂಸ್ಥೆ ಹಿರಿಯ ಸದಸ್ಯ ಕೆ. ಚಂದ್ರಸೇನನ್, ರವಿ ಮೂಲಗೆ ಹಾಗೂ ಮತ್ತಿತರರು ಹಾಜರಿದ್ದರು. ಶಿವಕುಮಾರ್ ಪಾಟೀಲ್ ಕಾರ್ಯಕ್ರಮ ಪ್ರಾಯೋಜಿಸಿದ್ದರು.

Leave a Reply

Your email address will not be published. Required fields are marked *