ಉತ್ತಮ ಇಳುವರಿಗೆ ಸಾವಯವ ಕೃಷಿ ಸಹಕಾರಿ: ಪೀರಣ್ಣ ಸಲಹೆ

ಬಸವಕಲ್ಯಾಣ: ರೈತರು ಸಾವಯುವ ಕೃಷಿಗೆ ಮಹತ್ವ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ರಾಜೇಶ್ವರ ಕೃಷಿ ಅಧಿಕಾರಿ ಪೀರಣ್ಣ ಕರೆ ನೀಡಿದರು.ತಾಲೂಕಿನ ಹಂದ್ರಾಳ ಕೆ. ಗ್ರಾಮದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆ ಮತ್ತು ಶಾಂತೇಶ್ವರಿ ಸ್ವಯಂ ಸೇವಾ ಸಂಸ್ಥೆ ಆಶ್ರಯದಲ್ಲಿ ಸಾವಯುವ ಕೃಷಿ ಕುರಿತು ಮಾತನಾಡಿ, ಬೆಳೆಗಳಿಗೆ ರೋಗಗಳು, ಬ್ಯಾಕ್ಟಿರಿಯಾ ವೈರಸ್ ಪ್ರೋಟೋಜನ್ ಮುಂತಾದ ಸೂಕ್ಷ್ಮ ಜೀವಿಗಳಿಂದ ರೋಗ ಹರಡುತ್ತಿವೆ. ಇವುಗಳನ್ನು ನಿಯಂತ್ರಣದಲ್ಲಿಡಲು ಬೇವಿನ ಎಣ್ಣೆ ಹಾಗೂ ಬೇವಿನ ಹೊಂಗೆ, ಮತ್ತು ಜೀನ್ ಹಿಂಡಿಗಳನ್ನು ಮಣ್ಣಿಗೆ ಸೇರಿಸುವ ಮುಖಾಂತರ ರೋಗಗಳು ನಿಯಂತ್ರಣಕ್ಕೆ ತರಬಹುದು ಎಂದರು.

ಪ್ರಭಾರಿ ಮುಖ್ಯಗುರು ನಾಗೇಂದ್ರ ರೆಡ್ಡಿ ಮಾತನಾಡಿ, ರೈತರು ಈ ಯೋಜನೆಯನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಸಾಯನಿಕ ಕೃಷಿ ಬಿಟ್ಟು ಸಾವಯುವ ಕೃಷಿ ಬಳಕೆ ಮಾಡುವಲ್ಲಿ ಮುಂದಾಗುವುದು ಅತಿ ಅವಶ್ಯಕವಾಗಿದೆ ಎಂದು ತಿಳಿಸಿದರು.ಸಾವಯುವ ಕೃಷಿಕರ ಸಂಘದ ಅಧ್ಯಕ್ಷ ರಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸುಧರಣಾ ಸಮಿತಿ ಅಧ್ಯಕ್ಷ ವೈಜಿನಾಥ ದೊಡ್ಡಮನಿ, ಕ್ಷೇತ್ರ ಅಧಿಕಾರಿ ಕರಬಸಯ್ಯ ಸ್ವಾಮಿ, ಗ್ರಾಮದಪ್ರಗತಿಪರ ರೈತ ಮಹಾದೇವ ರೆಡ್ಡಿ, ಉದಯಕುಮಾರ ಮಾಲಿಪಾಟೀಲ  ಭೀಮಶಾ ಹಡಪದ, ಪ್ರಕಾಶ ರೆಡ್ಡಿ, ಸಂಗಮೇಶ ಬಿರಾದರ, ಮೈನೋದ್ದಿನ್ ಸೇರಿದಂತೆ ರೈತರು ಪಾಲ್ಗೊಂಡಿದರು.

Leave a Reply

Your email address will not be published. Required fields are marked *