ಅನ್ನದಾತನ ಸಂರಕ್ಷಣೆ ಕಾನೂನು ಪ್ರಾಧಿಕಾರದ ಹೊಣೆ

ಅನ್ನದಾತನ ಸಂರಕ್ಷಣೆ ಕಾನೂನು ಪ್ರಾಧಿಕಾರದ ಹೊಣೆ: ನ್ಯಾ.ಹಂಚಾಟೆ

ಬೀದರ: ಇಡೀ ದೇಶಕ್ಕೆ ಅನ್ನ ಕೊಡುವ ರೈತರ ಸಂರಕ್ಷಣೆಗಾಗಿ ಕಾನೂನು ಸೇವಾ ಪ್ರಾಧಿಕಾರವು ಸದಾ ಸಿದ್ಧವಾಗಿದ್ದು, ಜಿಲ್ಲೆಯ ರೈತರು ಉಚಿತ ಕಾನೂನು ಅರಿವಿ ಹಾಗೂ ನೆರವು ಪಡೆದುಕೊಳ್ಳುವಂತೆ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಹಂಚಾಟೆ ಸಂಜೀವಕುಮಾರ ಹೇಳಿದರು.
CJM hanchate dissussion meeting  in Dist Court to Formersನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕಾನೂನು ಸೇವೆಗಳ ಸಮಿತಿಗಳ ಜಂಟಿ ಆಶ್ರಯದಲ್ಲಿ ಜಿಲ್ಲೆಯ ರೈತ ಬಾಂಧವರಿಗಾಗಿ ಆಯೋಜಿಸಲಾಗಿದ್ಧ ಉಚಿತ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮದಡಿ ರೈತ ಮುಖಂಡರು, ವಿಮಾ ಕಂಪನಿ ಹಾಗೂ ಕೃಷಿ ಅಧಿಕಾರಿಗಳ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರೈತರಲ್ಲಿ ಕಾನೂನು ಅರಿವಿನ ಕೊರತೆ ಇರುವ ಕಾರಣವೇ ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಿದ್ದು, ಅದು ತಪ್ಪಿಸಲು ಕೂಡಲೇ ಕಾನೂನಿನ ಮೊರೆ ಹೋಗಿ, ಅದರ ಲಾಭ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.

ವಿಮಾ ಕಂಪನಿ ಅಧಿಕಾರಿಯೊಂದಿಗೆ ಚರ್ಚಿಸಿದ ನ್ಯಾ.ಹಂಚಾಟೆ, ವಿಮಾ ಕಂಪನಿಗಳು ವಿಮೆ ಮಾಡಿಸಿಕೊಳ್ಳುವಾಗ ರೈತರಿಗೆ ತಮ್ಮ ಕಂಪನಿಯ ನೀತಿ ನಿಯಮಗಳನ್ನು ತಿಳಿಸಿ ವಿಮೆ ಮಾಡಿಸಿಕೊಳ್ಳಬೇಕೆ ವಿನಃ ತಪ್ಪು ದಾರಿಗೆ ಎಳೆಯದಂತೆ ವಿಮೆ ಅಧಿಕಾರಿಗೆ ತಾಕೀತು ಮಾಡಿದರು.

ಕೃಷಿ ಅಧಿಕಾರಿಗಳು ರೈತರ ಜಮಿನಿನಲ್ಲಿನ ಬೆಳೆ ವಿಕ್ಷಣೆ ಮಾಡುವಾಗ ರ್ಯಾಂಡಮ್ ಪದ್ದತಿ ಬಿಟ್ಟು ವಯಕ್ತಿಕವಾಗಿ ಪ್ರತಿಯೊಬ್ಬ ರೈತರ ಜಮಿನು ವಿಕ್ಷಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಹಾಗೆ ರೈತರ ಬೆಳೆ ಹಾಳಾದರೆ ಸೂಕ್ತ ಪರಿಹಾರ ಕೊಡಲು ಕೃಷಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಕೂಡದೆಂದು ತಿಳಿ ಹೇಳಿದರು.

ವಿಮೆ ಕಂಪನಿಗೆ ತನ್ನದೆ ಆದ ನೀತಿ ನಿಯಮಗಳಿರುವುದು ಸಾಮಾನ್ಯ ಸಂಗತಿ ಆದರೆ, ಕೃಷಿ ಅಧಿಕಾರಿಗಳು ಪ್ರತಿಯೊಬ್ಬ ರೈತರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಿ, ಮನವರಿಕೆ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಮೆ ಮಾಡಿಸಿ, ಬೆಳೆ ನಾಶವಾದರೆ ಕೂಡಲೇ ಸೂಕ್ತ ಹಾಗೂ ನ್ಯಾಯ ಸಮ್ಮತ ಪರಿಹಾರ ದೊರಕುವಂತೆ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದಾಗಿರುತ್ತದೆ ಎಂದವರು ಹೇಳಿದರು.

ವಕೀಲರೊಂದಿಗೆ ಚರ್ಚೆ ಮಾಡಿದ ನ್ಯಾಯಾಧೀಶರು, ರೈತರ ಯಾವುದೆ ಸಮಸ್ಯಗಳಿಗೆ ನ್ಯಾಯವಾದಿಗಳು ಯಾವುದೆ ಹಣ ಕೇಳದೆ ನ್ಯಾಠಯಯುತವಾಗಿ ಅವರ ಪ್ರಕರಣಗಳನ್ನು ಉಚಿತವಾಗಿ ಇತ್ಯರ್ಥಪಡಿಸಲು ವಿಶಾಲ ಮನೋಭಾವ ತಳೆಯುವಂತೆ ಕರೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ ಈ ಸಂದರ್ಭದಲ್ಲಿ ಮಾತನಾಡುತ್ತ, ರೈತರು ಇಲ್ಲಿಯ ವರೆಗೆ ಕಾನೂನನ್ನು ಸರಿಯಾಗಿ ಅರಿತು ಕೊಳ್ಳದ ಕಾರಣ ಹೈರಾಣಾಗಿರುವುದು ನಿಜ, ಆದರೆ ನ್ಯಾಯಾಧೀಶರೊಬ್ಬರು ರೈತರಿಗೂ ಸಹ ಕಾನೂನಿನ ಉಚಿತ ಅವಕಾಶ ಕಲ್ಪಿಸುವ ಮೂಲಕ ಅನ್ನದಾತನ ಹೆಗಲು ಗಟ್ಟಿಗೊಳಿಸಲು ಹೊರಟಿರುವ ಕ್ರಮ ಸ್ವಾಗತಾರ್ಹವಾಗಿದ್ದು, ಇನ್ನು ಮುಂದೆ ರೈತರ ಯಾವುದೆ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಹಿರಿಯ ಸಿವಿಲ ನ್ಯಾಯಾಧೀಶರಾದ ಸೋಮಶೇಖರ ಬಾದಾಮಿ, ಜೆ.ಎಮ್.ಎಫ್.ಸಿ ಪ್ರಧಾನ ಸಿವಿಲ ನ್ಯಾಯಾಧೀಶೆ ಹೇಮಾ ಪಸ್ತಾಪೂರ, ಜೆ.ಎಮ್.ಎಫ್.ಸಿ ಒಂದನೆ ಸಿವಿಲ ನ್ಯಾಯಾಧೀಶೆ ಪರ್ವಿನ್ ಬಂಕಾಪೂರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಾದೇವ ಪಾಟೀಲ, ವಿಮಾ ಕಂಪನಿ ಅಧಿಕಾರಿ ಪ್ರಭಾಕರ, ಜಂಟಿ ಕೃಷಿ ನಿರ್ದೇಶಕ ಸುರ್ಯಕಾಂತ ಬಿರಾದಾರ, ಔರಾದ್ ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ, ಕೃಷಿ ಅಧಿಕಾರಿ ರಾಜಕುಮಾರ ಎಕ್ಕೆಳ್ಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯಕ ಶಂಕ್ರೆಪ್ಪ ಜನಕಟ್ಟಿ, ರೈತ ಮುಖಂಡರುಗಳಾದ ವೈಜಿನಾಥ ನೌಬಾದೆ, ದಯಾನಂದ ಸ್ವಾಮಿ ಸಿರ್ಸಿ, ವೈಜಿನಾಥ ಭುಯ್ಯಾ, ಶಂಕ್ರೆಪ್ಪ ಪಾರಾ, ಶಿವರಾಜ ಪಾಟೀಲ, ಸುರ್ಯಕಾಂತ ಪಾಟೀಲ ರಾಜಗೀರಾ, ಸಿದ್ರಾಮಪ್ಪ ಅಣದುರೆ, ಬಾಬುರಾವ ಜೋಳದಾಬಕೆ, ಬಾಬುರಾವ ಕಣಜಿ, ಈರ್ಪಣ್ಣ ದುಬುಲಗುಂಡಿ, ವಿಶ್ವನಾಥ ಪಾಟೀಲ ಕೌಠಾ, ವೀರಭೂಷಣ ನಂದಗಾವೆ, ಸಿದ್ದಣ್ಣ ಸಣಮಣಿ ಸೇರಿದಂತೆ ಹಲವು ರೈತರು, ಕೃಷಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.

 

Sanjevani :NEWS Editor : Mr.Shivkumar Swamy

Leave a Reply

Your email address will not be published. Required fields are marked *